53 ರೊಹಿಂಗ್ಯ ಮುಸ್ಲಿಂ ವಿದ್ಯಾರ್ಥಿಗಳಿಗೆ ಟರ್ಕಿ ಸ್ಕಾಲರ್ ಷಿಪ್

ಮಯನ್ಮಾರ್ ನಿಂದ ಹೊರದೂಡಲ್ಪಡುತ್ತಿರುವ ರೊಹಿಂಗ್ಯಾ ಮುಸ್ಲಿಂರ ಕುರಿತು ವಿಶ್ವಾದ್ಯಂತ ಭಾರಿ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಟರ್ಕಿ ಸರ್ಕಾರ ತಾನು ರೊಹಿಂಗ್ಯ ಮುಸ್ಲಿಂ ವಿದ್ಯಾರ್ಥಿಗಳಿಗೆ ನೆರವು ನೀಡಲು ಸಿದ್ಧೆ ಎಂದು ಘೋಷಣೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ತಾನ್ ಬುಲ್: ಮಯನ್ಮಾರ್ ನಿಂದ ಹೊರದೂಡಲ್ಪಡುತ್ತಿರುವ ರೊಹಿಂಗ್ಯಾ ಮುಸ್ಲಿಂರ ಕುರಿತು ವಿಶ್ವಾದ್ಯಂತ ಭಾರಿ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಟರ್ಕಿ ಸರ್ಕಾರ ತಾನು ರೊಹಿಂಗ್ಯ ಮುಸ್ಲಿಂ ವಿದ್ಯಾರ್ಥಿಗಳಿಗೆ ನೆರವು ನೀಡಲು ಸಿದ್ಧೆ ಎಂದು ಘೋಷಣೆ ಮಾಡಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಟರ್ಕಿ ಉಪ ಪ್ರಧಾನಿ ಹಕನ್ ಕವುಸೊಗ್ಲು ಅವರು, ಹಿಂಸಾಚಾರ ಪೀಡಿತ ರಾಖೀನ್ ರಾಜ್ಯದ ರೊಹಿಂಗ್ಯಾ ಮುಸ್ಲಿಂ ವಿದ್ಯಾರ್ಥಿಗಳಿಗೆ ನೆರವು ನೀಡಲು ಟರ್ಕಿ ಸರ್ಕಾರ ಸಿದ್ಧವಿದೆ.  ರೊಹಿಂಗ್ಯಾದ 53 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಲಾಗಿದ್ದು, ವಿದ್ಯಾರ್ಥಿಗಳು ಸಂವಹನ, ಕಾನೂನು, ರಾಜ್ಯಶಾಸ್ತ್ರ ಹಾಗೂ ಮಾನವ ಹಕ್ಕು ವಿಷಯಗಳಲ್ಲಿ ಟರ್ಕಿಶ್ ವಿವಿಗಳಲ್ಲಿ ಶಿಕ್ಷಣ ಪಡೆಯಲಿದ್ದಾರೆ.  ಅಂತೆಯೇ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ವ್ಯವಸ್ಥೆ ಕೂಡ ಕಲ್ಪಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಈಗಾಗಲೇ ರಾಖೀನ್ ರಾಜ್ಯದ ವಿದ್ಯಾರ್ಥಿಗಳು ಟರ್ಕಿಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಟರ್ಕಿ ದೇಶವು ರೋಹಿಂಗ್ಯ ಮುಸ್ಲಿಮರಿಗೆ ಆಹಾರ ಮತ್ತು ಆರೋಗ್ಯ ಸೇವಾ ಸೌಲಭ್ಯಗಳನ್ನು ಒದಗಿಸಲು ಬದ್ಧವಾಗಿದೆ.  ಅಂತೆಯೇ ನಿರಾಶ್ರಿತರ ಶಿಬಿರಗಳಲ್ಲಿ ಸಂಚಾರಿ ಆರೋಗ್ಯ ಕ್ಲಿನಿಕ್ ಗಳನ್ನು ಸ್ಥಾಪಿಸಲಾಗುವುದು ಎಂದೂ ಅವರು ತಿಳಿಸಿದರು.

ಭದ್ರತಾ ಕಾರಣ ಒಡ್ಡಿ ಮಯನ್ಮಾರ್ ಸರ್ಕಾರ ರೊಹಿಂಗ್ಯ ಮುಸ್ಲಿಮರ ಕುರಿತು ಕಠಿಣ ನಿಲುವು ತಳೆದಿದ್ದು, ರೊಹಿಂಗ್ಯ ಮುಸ್ಲಿಮರು ಯಥೇಚ್ಚ ಪ್ರಮಾಣದಲ್ಲಿರುವ ರಾಖೀನ್ ರಾಜ್ಯದಲ್ಲಿ ಹಿಂಸಾಚಾರ ನಡೆಯುತ್ತಿದೆ. ಈ ಸಂಬಂಧ  ಮಯನ್ಮಾರ್ ನಿಂದ ರೊಹಿಂಗ್ಯ ಮುಸ್ಲಿಮರು ಬಾಂಗ್ಲಾದೇಶಕ್ಕೆ ವಲಸೆ ಹೋಗುತ್ತಿದ್ದು, ಈ ವರೆಗೂ ಸುಮಾರು 5,07,000 ರೋಹಿಂಗ್ಯನ್ನರು ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com