ವಿವಿಐಪಿ ಚಾಪರ್ ಹಗರಣ: ಇಟಲಿಯಲ್ಲಿ ಪ್ರಮುಖ ಆರೋಪಿ, ಮಧ್ಯವರ್ತಿ ಕಾರ್ಲೋಸ್ ಗೆರೋಸಾ ಬಂಧನ

ಬಹುಕೋಟಿ ವಿವಿಐಪಿ ಕಾಪ್ಟರ್ ಖರೀದಿ ಹಗರಣ ಸಂಬಂಧ ಗುರುವಾರ ಇಟಲಿ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಮತ್ತು ಮಧ್ಯವರ್ತಿ ಕಾರ್ಲೋ ಗೆರೋಸಾನನ್ನ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಎಸ್ ಪಿ ತ್ಯಾಗಿ ಮತ್ತು ಅಜ್ಞಾತ ದಲ್ಲಾಳಿ ಗೆರೋಸಾ (ಸಂಗ್ರಹ ಚಿತ್ರ)
ಎಸ್ ಪಿ ತ್ಯಾಗಿ ಮತ್ತು ಅಜ್ಞಾತ ದಲ್ಲಾಳಿ ಗೆರೋಸಾ (ಸಂಗ್ರಹ ಚಿತ್ರ)
ರೋಮ್: ಬಹುಕೋಟಿ ವಿವಿಐಪಿ ಕಾಪ್ಟರ್ ಖರೀದಿ ಹಗರಣ ಸಂಬಂಧ ಗುರುವಾರ ಇಟಲಿ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಮತ್ತು ಮಧ್ಯವರ್ತಿ ಕಾರ್ಲೋ ಗೆರೋಸಾನನ್ನ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಹಗರಣ ಸಂಬಂಧ ತನಿಖೆ ಎದುರಿಸುತ್ತಿರುವ ಆರೋಪಿಗಳು ನೀಡಿರುವ ಮಾಹಿತಿಯನ್ವಯ ಹಗರಣದಲ್ಲಿ ಸ್ವಿಸ್ ಮೂಲದ ದಲ್ಲಾಳಿ ಕಾರ್ಲೋ ಗೆರೋಸಾ ಕೂಡ ಪ್ರಮುಖ ಪಾತ್ರ ವಹಿಸಿದ್ದ ಎಂದು ತಿಳಿದುಬಂದಿತ್ತು.  ಅದರಂತೆ ಕಾರ್ಯಾಚರಣೆ ನಡೆಸಿದ್ದ ಇಟಲಿ ಅಧಿಕಾರಿಗಳು ಇಂದು ದಲ್ಲಾಳಿ ಕಾರ್ಲೋಸ್ ಗೆರೋಸಾನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಇಟಲಿ ಅಧಿಕಾರಿಗಳು ನೀಡಿರುವ ಮಾಹಿತಿಯನ್ವಯ ಗೆರೋಸಾ ಸ್ವಿಟ್ಜರ್ಲೆಂಡ್ ನಿಂದ ಇಟಲಿಗೆ ಆಗಮಿಸಿದ್ದ ವೇಳೆ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದುಂದಿದೆ. ಗೆರೋಸಾ ಆಗಮನ ಸಂಬಂಧ ಖಚಿತ ಮಾಹಿತಿ ಪಡೆದಿದ್ದ  ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಪ್ರಸ್ತುತ ಬಂಧನಕ್ಕೀಡಾಗಿರುವ ಗೆರೋಸಾನನ್ನು ವಿಚಾರಣೆಗೊಳಪಡಿಸಲು ಭಾರತದ ಉನ್ನತ ಮಟ್ಟದ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ  ಇಟಲಿ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಇದೇ ಪ್ರಕರಣದಲ್ಲಿ ಅಧಿಕಾರಿಗಳಿಂದ ತನಿಖೆಗೊಳಗಾಗಿದ್ದ ಪ್ರಮುಖ ಆರೋಪಿಗಳು ಕಾರ್ಲೋಸ್ ಗೆರೋಸಾ ಪಾತ್ರದ ಕುರಿತು ಬಾಯಿ ಬಿಟ್ಟಿದ್ದರು. ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಲೆ ಹಾಕಿರುವ  ಮಾಹಿತಿ ಪ್ರಕಾರ, ಕಾಪ್ಟರ್ ಖರೀದಿ ಒಪ್ಪಂದ ಸಂಬಂಧ ದಲ್ಲಾಳಿ  ಕಾರ್ಲೋ ಗೆರೋಸಾನ ಸ್ವಿಟ್ಜರ್ಲೆಂಡ್ ಮೊಬೈಲ್ ಸಂಖ್ಯೆ 41796****71 ಕ್ಕೆ 2010 ಫೆಬ್ರವರಿ 8ರಂದು ಅಂದರೆ ಭಾರತ ಸರ್ಕಾರ ಅಗಸ್ಟಾ ವೆಸ್ಟ್ ಲ್ಯಾಂಡ್  ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ  ಹಾಕಿದ ದಿನವೇ ಭಾರತದ 9810****91 ಸಂಖ್ಯೆಯಿಂದ ಕರೆ ಹೋಗಿದ್ದ ವಿಚಾರವನ್ನು ಅಧಿಕಾರಿಗಳು ಕಲೆ ಹಾಕಿದ್ದರು.

ದಲ್ಲಾಳಿ ಕಾರ್ಲೋಸ್ ಗೆರೋಸಾಗೆ ಭಾರತದಿಂದ ಅಂದಿನ ವಾಯುಸೇನಾ ಮುಖ್ಯಸ್ಥ ಎಸ್ ಪಿ ತ್ಯಾಗಿ ಅವರ ಸಹೋದರ ಸಂಬಂಧಿ ಸಂದೀಪ್ ತ್ಯಾಗಿ ಎಂಬುವವರು ಕರೆ ಮಾಡಿರುವ ಕುರಿತು ಅಧಿಕಾರಿಗಳು ಮಾಹಿತಿ   ಕಲೆಹಾಕಿದ್ದರು. ಅಂತೆಯೇ ಈ ಕರೆ ಮಾಡಿದ ಬಳಿಕ ಸುಮಾರು 10 ದಿನಗಳ ಅಂತರದಲ್ಲಿ ಅಂದರೆ 2010 ಫೆಬ್ರವರಿ 20ರಂದು ಮತ್ತೆ ಸ್ವಿಟ್ಜರ್ ಲೆಂಡ್ ನಿಂದ ಸಂದೀಪ್ ತ್ಯಾಗಿ ಅವರಿಗೆ ಕರೆಬಂದಿದ್ದು, ಆ ಕರೆಯನ್ನು  ದಲ್ಲಾಳಿ  ಕಾರ್ಲೋಸ್ ಗೆರೋಸಾ 417*****989 ನಿಂದ ಮಾಡಿದ್ದ ಎಂದು ತಿಳಿದುಬಂದಿದೆ. ಗೆರೋಸಾ ಕೂಡ ಹಗರಣದ ಪ್ರಮುಖ ದಲ್ಲಾಳಿ ಗಿಡೋ ಹಶ್ಕೆಯ ಆಪ್ತನಾಗಿದ್ದು, ಎಲ್ಲರೂ ಸೇರಿ ಕಾಪ್ಟರ್  ಹಗರಣದ ಒಪ್ಪಂದ ಕುದುರಿಸಿದ್ದರು ಎಂದು  ತಿಳಿದುಬಂದಿದೆ.

ಸುಮಾರು ತಿಂಗಳುಗಳ ಕಾಲ ಸಂದೀಪ್ ತ್ಯಾಗಿ ಮತ್ತು ಕಾರ್ಲೋಸ್ ಗೆರೋಸಾ ಆಗಾಗ ದೂರವಾಣಿ ಸಂಪಕರ್ದಲ್ಲಿದ್ದ ವಿಚಾರ ಈ ಹಿಂದೆ ಬಹಿರಂಗವಾಗಿತ್ತು. ಇನ್ನು ಹಗರಣದಲ್ಲಿ ತ್ಯಾಗಿ ಅವರ  ಮತ್ತೋರ್ವ ಸಹೋದರ ರಾಜೀವ್  ತ್ಯಾಗಿ ಪಾತ್ರದ ಕುರಿತೂ ಇಡಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com