ಲಾಸ್ ವೇಗಾಸ್ ಶೂಟೌಟ್'ನಲ್ಲಿ ಭಯೋತ್ಪಾದಕರ ಕೈವಾಡವಿಲ್ಲ: ಎಫ್'ಬಿಐ

ವಾರಗಳ ಹಿಂದಷ್ಟೇ ಲಾಸ್ ವೇಗಾಸ್ ನಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ಭಯೋತ್ಪಾದಕರ ಕೈವಾಡ ಕುರಿತು ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ಫೆಡರಲ್ ಬ್ಯೂರೋ ಆಫ್ ಇನ್'ವೆಸ್ಟಿಗೇಷನ್ (ಎಫ್'ಬಿಐ) ಬುಧವಾರ ಹೇಳಿದೆ...
ಲಾಸ್ ವೇಗಾಸ್ ಶೂಟೌಟ್
ಲಾಸ್ ವೇಗಾಸ್ ಶೂಟೌಟ್

ಲಾಸ್'ವೇಗಾಸ್: ವಾರಗಳ ಹಿಂದಷ್ಟೇ ಲಾಸ್ ವೇಗಾಸ್ ನಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ  ಭಯೋತ್ಪಾದಕರ ಕೈವಾಡ ಕುರಿತು ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ಫೆಡರಲ್ ಬ್ಯೂರೋ ಆಫ್ ಇನ್'ವೆಸ್ಟಿಗೇಷನ್ (ಎಫ್'ಬಿಐ) ಬುಧವಾರ ಹೇಳಿದೆ. 

ಈ ಕುರಿತಂತೆ ಮಾತನಾಡಿರುವ ಎಫ್'ಬಿಐ ವಿಶೇಷ ಉಸ್ತುವಾರಿ ಅಧಿಕಾರಿ ಆರೊನ್ ರೌಸ್ ಅವರು, ಲಾಸ್ ವೇಗಾಸ್ ನಲ್ಲಿ ಶೂಟೌಟ್ ನಡೆಸಿದ್ದ ವ್ಯಕ್ತಿಯ ಗೆಳತಿಯನ್ನು ಪ್ರಕರಣ ಸಂಬಂಧ ವಿಚಾರಣೆಗೊಳಪಡಿಸಲಾಗಿತ್ತು. ಪ್ರಕರಣ ಸಂಬಂಧ ಈವರೆಗೂ ಯಾರೊಬ್ಬರನ್ನೂ ವಶಕ್ಕೆ ಪಡೆದುಕೊಂಡಿಲ್ಲ ಎಂದು ಹೇಳಿದ್ದಾರೆ. 

ಶೂಟೌಟ್ ನಡೆಸಿದ್ದ ವ್ಯಕ್ತಿಯೇ ದಾಳಿಯ ಹೊಣೆಗಾರನಾಗಿದ್ದಾನೆ. ಪ್ರಕರಣ ಹಿಂದೆ ಭಯೋತ್ದಾದಕರ ಕೈವಾಡವಿಲ್ಲ. ಹಲವು ವರ್ಷಗಳಿಂದಲೂ ಆರೋಪಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದು, ರಹಸ್ಯವಾಗಿ ಜೀವನ ನಡೆಸುತ್ತಿದ್ದ ಎಂದು ತಿಳಿಸಿದ್ದಾರೆ.

ಮ್ಯಾಂಡಲಾ ಬೇ ಕ್ಯಾಸಿನೋ ಮತ್ತು ಹೋಟೆಲ್‌ನ ಆವರಣದ ಸಮೀಪದಲ್ಲಿ ಆಮೆರಿಕದ ಖ್ಯಾತ ಗಾಯಕ ಜೇಸನ್‌ ಆಲೆಕ್ಸನ್‌ ಅವರ 'ರೂಟ್‌ 91' ಎಂಬ ಮೂರು ದಿನಗಳ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಮಹಡಿ  ಮೇಲಿಂದ ದಾಳಿಕೋರನೋರ್ವ ಏಕಾಏಕಿ ಗುಂಡಿನ ಮಳೆಗರೆಯಲಾಭಿಸಿದ್ದ. ಘಟನೆಯಲ್ಲಿ 60 ಮಂದಿ ಸಾವನ್ನಪ್ಪಿ, 515ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com