ಆಫ್ಘಾನಿಸ್ತಾನದಲ್ಲಿ ಅಪಹರಣಕ್ಕೀಡಾಗಿದ್ದ ಭಾರತೀಯ ಎಂಜಿನಿಯರ್ ನ ರಕ್ಷಣೆ

ಎರಡು ತಿಂಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ಅಪಹರಣಕ್ಕೊಳಗಾಗಿದ್ದ ಭಾರತ ಮೂಲದ ಎಂಜಿನಿಯರ್ ಒಬ್ಬರನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕಾಬುಲ್: ಎರಡು ತಿಂಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ಅಪಹರಣಕ್ಕೊಳಗಾಗಿದ್ದ ಭಾರತ ಮೂಲದ ಎಂಜಿನಿಯರ್ ಒಬ್ಬರನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
ಆಫ್ಘಾನಿಸ್ತಾನದ ವಾರ್ಡಾಕ್ ಪ್ರಾಂತ್ಯದಲ್ಲಿ ಅಪಹರಣಕಾರರ ಮುಷ್ಟಿಯಲ್ಲಿದ್ದ ಎಂಜಿನಿಯರ್ ನನ್ನು ಸ್ಥಳೀಯ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಮುಕ್ತಗೊಳಿಸಿದ್ದಾರೆ ಎಂದು ಸ್ಥಳೀಯ ಟಿವಿ ಚಾನಲ್ ಗಳು ವರದಿ ಮಾಡಿವೆ.

ಸಂತ್ರಸ್ತ ಎಂಜಿನಿಯರ್ ವಿದ್ಯುತ್ ಮೂಲಸೌಕರ್ಯಗಳ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಎನ್ನಲಾಗಿದೆ. ಪ್ರಸ್ತುತ ಅಪಹರಣಕಾರರ ಕೈಯಿಂದ ಬಿಡುಗಡೆಯಾಗಿರುವ ಎಂಜಿನಿಯರ್ ಅವರ ಹೆಸರನ್ನು ಪೊಲೀಸರು  ಬಹಿರಂಗಪಡಿಸಿಲ್ಲ. ಸಂತ್ರಸ್ಥ ವ್ಯಕ್ತಿ ವಿದ್ಯುತ್ ಮೂಲಸೌಕರ್ಯಗಳ ಕಂಪೆನಿಯಾಗಿರುವ 'ತುರ್ಕಮೇನಿಸ್ತಾನ್ ಪವರ್ ಲೈನ್ ಪ್ರಾಜೆಕ್ಟ್' ನಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ.

ಕರ್ತವ್ಯ ನಿರತ ಎಂಜಿನಿಯರ್ ರನ್ನು ಅನಾಮಧೇಯ ಶಸ್ತ್ರಧಾರಿಗಳು ಅಪಹರಿಸಿದ್ದರು. ಶನಿವಾರ ಕಾರ್ಯಾಚರಣೆ ನಡೆಸಿದ ವಾರ್ಡಾಕ್ ಪೊಲೀಸರು ಎಂಜಿನಿಯರ್ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com