ಪನಾಮ ಪೇಪರ್ಸ್ ಪ್ರಕರಣ: ವಿಚಾರಣೆ ಹಾಜರಾಗಲು ನವಾಜ್ ಷರೀಫ್ ಪುತ್ರರಿಗೆ 30 ದಿನ ಕಾಲವಕಾಶ

ಪನಾಮ ಪೇಪರ್ಸ್ ಲೀಕ್ ಹಗರಣಕ್ಕೆ ಸಂಬಂಧಿಸಿದೆ 30 ದಿನದೊಳಗೆ ವಿಚಾರಣೆಗೆ ಹಾಜರಾಗಿ, ಇಲ್ಲದಿದ್ದರೆ ಘೋಷಿತ ಅಪರಾಧಿ....
ನವಾಜ್ ಷರೀಫ್
ನವಾಜ್ ಷರೀಫ್
ಲಾಹೋರ್: ಪನಾಮ ಪೇಪರ್ಸ್ ಲೀಕ್ ಹಗರಣಕ್ಕೆ ಸಂಬಂಧಿಸಿದೆ 30 ದಿನದೊಳಗೆ ವಿಚಾರಣೆಗೆ ಹಾಜರಾಗಿ, ಇಲ್ಲದಿದ್ದರೆ ಘೋಷಿತ ಅಪರಾಧಿ ಎಂದು ಘೋಷಿಸುವುದಾಗಿ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರರಿಗೆ  ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ಕೋರ್ಟ್ ಗುರುವಾರ ಎಚ್ಚರಿಕೆ ನೀಡಿದೆ.
ನವಾಜ್ ಷರೀಫ್ ಪುತ್ರರಾದ ಹಸನ್ ಮತ್ತು ಹುಸೇನ್ ಅವರು ಅನಾರೋಗ್ಯಪೀಡಿತ ತಮ್ಮ ತಾಯಿ ಕುಲ್ಸೂಮ್ ನೊಂದಿ ಲಂಡನ್ ನಲ್ಲಿದ್ದು, ಅವರ ವಿರುದ್ಧ ರೇಡ್ ವಾರೆಂಟ್ ಜಾರಿ ಮಾಡುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. 
ಮೂರು ಭ್ರಷ್ಟಾಚಾರ ಪ್ರಕರಣ ಮತ್ತು ಅಕ್ರಮ ಹಣ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ಷರೀಫ್ ಪುತ್ರರು ಇಸ್ಲಾಮಾಬಾದ್ ಅಕೌಂಟೇಬಿಲಿಟಿ ಕೋರ್ಟ್ ಮುಂದೆ ಒಂದು ತಿಂಗಳೊಳಗೆ ವಿಚಾರಣೆಗೆ ಹಾಜರಾಗಬೇಕಿದೆ.
ಪನಾಮಾ ಪೇಪರ್‌ ಲೀಕ್‌ ಮೂಲಕ ಪಾಕ್‌ ಮಾಜಿ ಪ್ರಧಾನಿ ನವಾಜ್‌ ಷರೀಫ್ ಮತ್ತು ಅವರ ಕುಟುಂಬ ಸದಸ್ಯರು ವಿದೇಶಗಳಲ್ಲಿ ಹಲವಾರು ಖೊಟ್ಟಿ ಕಂಪೆನಿಗಳನ್ನು ಸ್ಥಾಪಿಸಿ ಕೋಟ್ಯಂತರ ರು. ಮೌಲ್ಯದ ಆಸ್ತಿ ಮಾಡಿಟ್ಟಿರುವುದು ಬೆಳಕಿಗೆ ಬಂದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com