ಕಳೆದ ಜನವರಿ 31ರಿಂದ ಗೃಹ ಬಂಧನದಲ್ಲಿರುವ ಜಮಾತ್-ಉದ್-ದವಾ(ಜೆಯುಡಿ) ಮುಖ್ಯಸ್ಥ ಸಯೀದ್ ನನ್ನು ಭಾರಿ ಭದ್ರತೆಯೊಂದಿಗೆ ಇಂದು ಪ್ರಾಂತೀಯ ನ್ಯಾಯಾಂಗ ವಿಮರ್ಶೆ ಮಂಡಳಿ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಂಗ ಮಂಡಳಿ, ಸಯೀದ್ ಗೃಹ ಬಂಧನ ಅವಧಿಯನ್ನು ಅಕ್ಟೋಬರ್ 24ರಿಂದ 30 ದಿನಗಳ ಕಾಲ ವಿಸ್ತರಿಸಿದೆ. ಆದರೆ ಸಯೀದ್ ಅವರ ನಾಲ್ವರು ಸಹಚರರಾದ ಅಬ್ದುಲ್ಲಾ ಉಬೈದ್, ಮಲಿಕ್ ಜಾಫರ್ ಇಕ್ಬಾಲ್, ಅಬ್ದುಲ್ ರೆಹಮಾನ್ ಅಬಿದ್ ಮತ್ತು ಖಝಿ ಕಾಶಿಫ್ ಹುಸೇನ್ ಅವರ ಗೃಹ ಬಂಧನ ಅವಧಿ ಮುಗಿದಿದ್ದು, ಜೈಲಿನಿಂದ ಬಿಡುಗಡೆಯಾಗಲಿದ್ದಾರೆ