ಸೊಮಾಲಿಯಾ ಬಾಂಬ್ ಸ್ಫೋಟ ದುರಂತ: ಸಾವಿನ ಸಂಖ್ಯೆ 358ಕ್ಕೆ ಏರಿಕೆ

ಸೊಮಾಲಿಯಾ ರಾಜಧಾನಿಯಲ್ಲಿ ಸಂಭವಿಸಿದ ಪ್ರಬಲ ಬಾಂಬ್ ಸ್ಫೋಟ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 358ಕ್ಕೆ ಏರಿಕೆಯಾಗಿದ್ದು, ಹಲವಾರು ಮಂದಿ ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮೊಗಾದಿಶು: ಸೊಮಾಲಿಯಾ ರಾಜಧಾನಿಯಲ್ಲಿ ಸಂಭವಿಸಿದ ಪ್ರಬಲ ಬಾಂಬ್ ಸ್ಫೋಟ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 358ಕ್ಕೆ ಏರಿಕೆಯಾಗಿದ್ದು, ಹಲವಾರು ಮಂದಿ ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ. 
ಸೊಮಾಲಿಯಾ ರಾಜಧಾನಿ ಮೊಗಾದಿಶುವಿನಲ್ಲಿ ಕಳೆದ ಶನಿವಾರ ಉಗ್ರರು ಟ್ರಕ್ ದಾಳಿ ನಡೆಸಿದ್ದರು. ಈ ವೇಳೆ ನೂರಾರು ಸಂಖ್ಯೆಯಲ್ಲಿ ಜನರು ಸಾವನ್ನಪ್ಪಿದ್ದರು. ಅಲ್ಲದೆ 228 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಸಾವನ್ನಪ್ಪಿದವರ ಸಂಖ್ಯೆ 358ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಇನ್ನು ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಅಮೆರಿಕ, ದಾಳಿಗೆ ಕಾರಣವಾಗಿರುವ ಅಲ್-ಶಹಬ್ ವಿರುದ್ಧ ಡ್ರೋಣ್ ದಾಳಿ ನಡೆಸಲಾಗುತ್ತದೆ ಎಂದು ಹೇಳಿಕೊಂಡಿದೆ. 
ಸೋಮಾಲಿಯಾ ವಾರ್ತಾ ಸಚಿವ ಅಬ್ದಿರಾಹ್ಮನ್ ಒಸ್ಮಾನ್ ಮಾತನಾಡಿ, ಟ್ರಕ್ ದಾಳಿಯಲ್ಲಿ 228 ಮಂದಿ ಗಾಂಭೀರವಾಗಿ ಗಾಯಗೊಂಡಿದ್ದರು. ಇದರಲ್ಲಿ 122 ಮಂದಿ ಜನರನ್ನು ವಿಮಾನದ ಮೂಲಕ ಚಿಕಿತ್ಸೆಗಾಗಿ ಟರ್ಕಿ, ಸುಡಾನ್ ಹಾಗೂ ಕೀನ್ಯಾ ದೇಶಗಳಿಗೆ ಕಳುಹಿಸಲಾಗಿದೆ. 56 ಮಂದಿ ಈಗಲೂ ನಾಪತ್ತೆಯಾಗಿದ್ದಾರೆಂದು ಹೇಳಿದ್ದಾರೆ. 
ಉಗ್ರರ ಗುಂಪು ಸೊಮಾಲಿಯಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಸಂಚು ರೂಪಿಸಿದ್ದರು. ವಿಮಾನ ನಿಲ್ದಾಣದ ಬಳಿ ಹಲವು ದೇಶಗಳ ರಾಯಭಾರಿ ಕಚೇರಿಗಳಿದ್ದು, ಒಂದು ವೇಳೆ ಉಗ್ರರ ಯತ್ನಗಳು ಯಶಸ್ವಿಯಾಗಿದ್ದೇ ಆಗಿದ್ದರೆ, ದೊಡ್ಡ ಅನಾಹುತ ಎದುರಾಗುತ್ತಿತ್ತು ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com