ಮೂರನೇ ಮಗುವಿನ ನಿರೀಕ್ಷೆಯಲ್ಲಿ ಪ್ರಿನ್ಸ್ ವಿಲಿಯಮ್ ಮತ್ತು ಕೇಟ್ ಮಿಡ್ಲ್​ಟನ್

ಬ್ರಿಟನ್ ರಾಜದಂಪತಿ ಪ್ರಿನ್ಸ್ ವಿಲಿಯಮ್ ಮತ್ತು ಕೇಟ್ ಮಿಡ್ಲ್​ಟನ್ ತಮ್ಮ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಸೋಮವಾರ....
ಪ್ರಿನ್ಸ್ ವಿಲಿಯಮ್ ಮತ್ತು ಕೇಟ್ ಮಿಡ್ಲ್​ಟನ್
ಪ್ರಿನ್ಸ್ ವಿಲಿಯಮ್ ಮತ್ತು ಕೇಟ್ ಮಿಡ್ಲ್​ಟನ್
ಲಂಡನ್: ಬ್ರಿಟನ್ ರಾಜದಂಪತಿ ಪ್ರಿನ್ಸ್ ವಿಲಿಯಮ್ ಮತ್ತು ಕೇಟ್ ಮಿಡ್ಲ್​ಟನ್ ತಮ್ಮ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಸೋಮವಾರ ಕೆನ್ಸಿಂಗ್ ಟನ್ ಅರಮನೆ ಘೋಷಿಸಿದೆ. ಅಲ್ಲದೆ ಕೇಟ್ ಮಿಡ್ಲ್ ಟನ್ ಅವರು ನಿಗದಿತ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ರಾಯಲ್ ದಂಪತಿಯ ಮೊದಲ ಮಗ ನಾಲ್ಕು ವರ್ಷದ ಪ್ರಿನ್ಸ್ ಜಾರ್ಜ್ ಲಂಡನ್ ನಲ್ಲಿ ಶಾಲೆಗೆ ಹೋಗಲು ಆರಂಭಿಸಿದ ಒಂದು ವಾರದಲ್ಲಿಯೇ ಮೂರನೇ ಮಗುವಿನ ಸುದ್ದಿ ಬಂದಿದೆ. ಬ್ರಿಟನ್ ರಾಜ ದಪಂತಿಗೆ ಪ್ರಿನ್ಸಸ್ ಚಾರ್ಲೊಟೆ ಎಂಬ ಎರಡು ವರ್ಷದ ಮಗಳಿದ್ದಾಳೆ.
ರಾಜ ದಂಪತಿ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ತಿಳಿಸಲು ಹರ್ಷವಾಗುತ್ತಿದೆ ಎಂದು ಅರಮನೆ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com