ರಕ್ಷಣಾ ಸಹಕಾರ ವೃದ್ಧಿಗೆ ಭಾರತ, ಜಪಾನ್ ಒಪ್ಪಿಗೆ

ರಕ್ಷಣಾ ಸಹಕಾರದ ವಿಷಯದಲ್ಲಿ ಮತ್ತಷ್ಟು ನಿಕಟವಾಗಿ ಕಾರ್ಯನಿರ್ವಹಿಸಲು ಭಾರತ-ಜಪಾನ್ ಒಪ್ಪಿಗೆ ಸೂಚಿಸಿವೆ.
ಭಾರತ-ಜಪಾನ್
ಭಾರತ-ಜಪಾನ್
Updated on
ನವದೆಹಲಿ: ರಕ್ಷಣಾ ಸಹಕಾರದ ವಿಷಯದಲ್ಲಿ ಮತ್ತಷ್ಟು ನಿಕಟವಾಗಿ ಕಾರ್ಯನಿರ್ವಹಿಸಲು ಭಾರತ-ಜಪಾನ್ ಒಪ್ಪಿಗೆ ಸೂಚಿಸಿವೆ. 
ಉಭಯ ರಾಷ್ಟ್ರಗಳು ಬಳಕೆ ಮಾಡಬಹುದಾದಂತಹ ತಂತ್ರಜ್ಞಾನ ಸೇರಿದಂತೆ ಹಲವು ರಕ್ಷಣಾ ವಿಷಯಗಳಿಗೆ ಸಂಬಂಧಿಸಿದ ಸಹಕಾರಗಳನ್ನು ವೃದ್ಧಿಸಲು ಉಭಯ ರಾಷ್ಟ್ರಗಳೂ ತೀರ್ಮಾನಿಸಿವೆ. ಇತ್ತೀಚಿನವರೆಗೂ ಹಂಗಾಮಿ ರಕ್ಷಣಾ ಸಚಿವರಾಗಿದ್ದ ಅರುಣ್ ಜೇಟ್ಲಿ ಜಪಾನ್ ನ ರಕ್ಷಣಾ ಸಚಿವರೊಂದಿಗೆ ನಡೆಸಿದ್ದ ಮಾತುಕತೆಯ ನಂತರ ಈ ಬೆಳವಣಿಗೆ ನಡೆದಿದೆ. 
ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಬಲ ಹೆಚ್ಚುತ್ತಿದ್ದು, ಉತ್ತರ ಕೋರಿಯಾ ಎಗ್ಗಿಲ್ಲದೇ ಕ್ಷಿಪಣಿಗಳ ಪರೀಕ್ಷೆ ನಡೆಸುತ್ತಿರುವ ನಡುವೆ ರಕ್ಷಣಾ ಸಹಕಾರದ ವಿಷಯದಲ್ಲಿ ಮತ್ತಷ್ಟು ನಿಕಟವಾಗಿ ಕಾರ್ಯನಿರ್ವಹಿಸಲು ಭಾರತ-ಜಪಾನ್ ಮುಂದಾಗಿರುವುದು ಮಹತ್ವ ಪಡೆದುಕೊಂಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com