ಪ್ರಬಲ ಸೌರ ಸ್ಪೋಟಗಳ ಚಿತ್ರವನ್ನು ಸೆರೆ ಹಿಡಿದ ನಾಸಾ

ಸೂರ್ಯನಲ್ಲಿ ಉಂಟಾದ ಎರಡು ತೀವ್ರಗಾಮಿ ಸೌರ ಸ್ಫೋಟಗಳನ್ನು ಬುಧವಾರ ಅಮೆರಿಕಾ ಬಾಹ್ಯಾಕಾಶ ಸಂಸ್ಥೆ ಸಾನಾ ಸೆರೆ ಹಿಡಿದಿದೆ.
ನಾಸಾ
ನಾಸಾ
ವಾಷಿಂಗ್ಟನ್: ಸೂರ್ಯನಲ್ಲಿ ಉಂಟಾದ ಎರಡು ತೀವ್ರಗಾಮಿ ಸೌರ ಸ್ಫೋಟಗಳನ್ನು ಬುಧವಾರ ಅಮೆರಿಕಾ ಬಾಹ್ಯಾಕಾಶ ಸಂಸ್ಥೆ ಸಾನಾ ಸೆರೆ ಹಿಡಿದಿದೆ.
2008ರ ಡಿಸೆಂಬರ್ ನಲ್ಲಿ ಪ್ರಾರಂಭಗೊಂದ ಈ ಸೌರ ಚಕ್ರದದಲ್ಲಿ ಈ ಬಾರಿ ಸಂಭವಿಸಿದ್ದು ಎರಡನೇ ಅತಿ ದೊಡ್ಡ ಸೌರ ಸ್ಪೋಟ ಎಂದು ನಾಸಾ ವರದಿಯಲ್ಲಿ ತಿಳಿಸಿದೆ.  
ಸಂವಹನ ಉಪಗ್ರಹಗಳಿಗೆ ಅಡ್ಡಿಪಡಿಸುವ ಈ ಸ್ಫೋಟಗಳ ವಿಕಿರಣಗಳು ಭೂಮಿಯ ಮೇಲ್ಮೈ ವಾತಾವರನವನ್ನು ತಲುಪುವ ಮೂಲಕ ಜಿಪಿಎಸ್ ಮತ್ತು ವಿದ್ಯುತ್ ಗ್ರಿಡ್ ಗಳಿಗೆ ಹಾನಿ ಮಾಡುತ್ತವೆ. ಇಂತಹಾ ಸೌರ ಸ್ಪೋಟದ ದೃಷ್ಯಾವಳಿಗಳನ್ನು ಈ ಬಾರಿ ಅಮೆರಿಕಾ ಸ್ಪೇಸ್ ಏಜೆನ್ಸಿಯ ಸೋಲಾರ್ ಡೈನಾಮಿಕ್ಸ್ ವೀಕ್ಷಣಾಲಯದಿಂದ ಸೆರೆಹಿಡಿಯಲಾಗಿದೆ.
ಬಾಹ್ಯಾಕಾಶ ಹವಾಮಾನ ಮುನ್ಸೂಚನಾ ಕೇಂದ್ರ (ಎಸ್ ಡಬ್ಲ್ಯು ಪಿಸಿ) ದ ಪ್ರಕಾರ, ವರ್ಗ X ರ ಸ್ಫೋಟಗಳು ಎಂದು ಕರೆಯಲ್ಪಡುವ ಈ ವಲಯವು ಸೂರ್ಯನ ಬೆಳಕು ಬಿಳುತ್ತಿರುವ ಭೂಮಿಯ ಬಾಗದಲ್ಲಿ ಒಂದು ಗಂಟೆ ಕಾಲ ತನ್ನ ಪರಿನಾಮ ಬಿರಿದರೆ ಕಡಿಮೆ-ಆವರ್ತನ ಸಂಪರ್ಕ ಸಂವಹನ ತರಂಗಗಳಲ್ಲಿ ವ್ಯತ್ಯಾಸಗಳು ಉಂತಾಗುತ್ತವೆ.
ಹನ್ನೊಂದು  ವರ್ಷಗಳ ಅವಧಿಯಲ್ಲಿ ಒಂದು ಸೌರ ಚಕ್ರವು ಪೂರ್ಣವಾಗುತ್ತದೆ. ಈ ಕಡೆಯ ಹಂತದಲ್ಲಿ, ಇಂತಹಾ ಸೌರ ಸ್ಫೋಟಗಳು ವಿರಳವಾಗಿರುತ್ತವೆ ಆದರೆ ಅವು ಅತ್ಯಂತ ಪ್ರಬಲವಾಗಿರುವ ಸಾದ್ಯತೆಯನ್ನು ತಳ್ಳಿಹಾಕುವಂತಿಲ್ಲ. 
ಸೌರ ಚಂದಮಾರುತವು ಕೆಲವು ಸ್ಥಳಗಳಲ್ಲಿ ಕಾಂತೀಯ ಶಕ್ತಿಯನ್ನು ಶೇಖರಿಸುವುದರಿಂದ ಈ ಸ್ಪೋಟಗಳು ಉಂಟಾಗುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com