ಗೂಗಲ್ ಕಂಪೆನಿಯಲ್ಲಿಯೂ ಲಿಂಗ ತಾರತಮ್ಯ: ಮಾಜಿ ಮಹಿಳಾ ಉದ್ಯೋಗಿಗಳಿಂದ ಕೇಸು ದಾಖಲು!

ವೇತನ ಹೆಚ್ಚಳ ಮತ್ತು ಬಡ್ತಿ ವಿಚಾರದಲ್ಲಿ ಲಿಂಗ ತಾರತಮ್ಯ ಮಾಡಲಾಗುತ್ತದೆ ಎಂದು ಆರೋಪಿಸಿ ಗೂಗಲ್....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮೆನ್ಲೊ ಪಾರ್ಕ್ : ವೇತನ ಹೆಚ್ಚಳ ಮತ್ತು ಬಡ್ತಿ ವಿಚಾರದಲ್ಲಿ ಲಿಂಗ ತಾರತಮ್ಯ ಮಾಡಲಾಗುತ್ತದೆ ಎಂದು ಆರೋಪಿಸಿ ಗೂಗಲ್ ಕಂಪೆನಿಯ ಮೂವರು ಮಾಜಿ ಮಹಿಳಾ ಉದ್ಯೋಗಿಗಳು ಕಂಪೆನಿ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
ಸಾನ್ ಫ್ರಾನ್ಸಿಸ್ಕೊದ ಕ್ಯಾಲಿಫೋರ್ನಿಯಾ ಸ್ಟೇಟ್ ಕೋರ್ಟ್ ನಲ್ಲಿ ಮಾಜಿ ಮಹಿಳಾ ಉದ್ಯೋಗಿಗಳು ವರ್ಗ ಕ್ರಮದ ಮೊಕದ್ದಮೆ ಹೂಡಿದ್ದರಿಂದ ಇದೀಗ ಕಂಪೆನಿ ಅಮೆರಿಕಾದ ಲೇಬರ್ ಕೋರ್ಟ್ ನಿಂದ ಲಿಂಗ ತಾರತಮ್ಯ ಕುರಿತು ವಿಚಾರಣೆ ಎದುರಿಸಬೇಕಾಗಿದೆ.
ಅರ್ಜಿ ಸಲ್ಲಿಸಿದ ಮಹಿಳೆಯರಲ್ಲಿ ಒಬ್ಬರು ಗೂಗಲ್ ನ ಮಾಜಿ ಸಾಫ್ಟ್ ವೇರ್ ಎಂಜಿನಿಯರ್, ಮತ್ತೊಬ್ಬರು ಮಾಜಿ ಸಂವಹನಾ ತಜ್ಞೆ ಹಾಗೂ ಇನ್ನೊಬ್ಬರು ಮಾಜಿ ಮ್ಯಾನೇಜರ್ ಆಗಿದ್ದಾರೆ. ಕ್ಯಾಲಿಫೋರ್ನಿಯಾದ ಗೂಗಲ್ ಕಂಪೆನಿಯಲ್ಲಿ ಸಮನಾದ ಹುದ್ದೆ ಹೊಂದಿದ್ದರೂ ಕೂಡ ಮಹಿಳೆಯರಿಗೆ ಪುರುಷರಿಗಿಂತ ಕಡಿಮೆ ವೇತನ ನೀಡಲಾಗುತ್ತದೆ ಮತ್ತು ಬಡ್ತಿಗೆ ಅವಕಾಶ ಕಡಿಮೆಯಿರುವ ಕೆಲಸಗಳನ್ನು ಮಹಿಳಾ ನೌಕರರಿಗೆ ನೀಡಲಾಗುತ್ತದೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯಿಸಲು ಗೂಗಲ್ ಕಂಪೆನಿ ನಿರಾಕರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com