ಹೆಚ್-1ಬಿ ವೀಸಾ ನೀಡುವ ಪ್ರಕ್ರಿಯೆಗೆ ಅಮೆರಿಕಾ ಮರು ಚಾಲನೆ

ಎಲ್ಲಾ ವಿಭಾಗಗಳಲ್ಲಿ ಹೆಚ್-1 ಬಿ ವೃತ್ತಿ ವೀಸಾ ನೀಡುವ ಪ್ರಕ್ರಿಯೆಯನ್ನು ಅಮೆರಿಕಾ ತೀವ್ರಗೊಳಿಸಿದೆ. ವಿದೇಶಿಗರಿಗೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಎಲ್ಲಾ ವಿಭಾಗಗಳಲ್ಲಿ ಹೆಚ್-1 ಬಿ ವೃತ್ತಿ ವೀಸಾ ನೀಡುವ ಪ್ರಕ್ರಿಯೆಯನ್ನು ಅಮೆರಿಕಾ ತೀವ್ರಗೊಳಿಸಿದೆ. ವಿದೇಶಿಗರಿಗೆ ಅದರಲ್ಲೂ ಭಾರತೀಯ ಐಟಿ ವೃತ್ತಿಪರರಿಗೆ ನೀಡುವ ಜನಪ್ರಿಯ ವೃತ್ತಿ ವೀಸವಾದ ಹೆಚ್-1ಬಿ ವೀಸಾಕ್ಕೆ ಅರ್ಜಿ ಅತ್ಯಧಿಕ ಪ್ರಮಾಣದಲ್ಲಿ ಬರುವ ಸಾಧ್ಯತೆಯಿಂದ 5 ತಿಂಗಳುಗಳ ಕಾಲ ಅಮೆರಿಕಾ ಸ್ಥಗಿತಗೊಳಿಸಿತ್ತು.
ತಾಂತ್ರಿಕ ನೈಪುಣ್ಯತೆ ಹೊಂದಿರುವ ಐಟಿ ವೃತ್ತಿಪರರಿಗೆ ಅಮೆರಿಕಾದಲ್ಲಿ ಕಂಪೆನಿಗಳಲ್ಲಿ ಕೆಲಸ ಮಾಡಲು ವಿದೇಶಿ ನೌಕರರಿಗೆ ನೀಡುವ ವಲಸೆರಹಿತ ವೀಸಾ ಹೆಚ್-1 ಬಿ ವೀಸಾ ಆಗಿದೆ. ಅಮೆರಿಕಾದ ತಾಂತ್ರಿಕ ಕಂಪೆನಿಗಳು ಅಲ್ಲಿನ ಸರ್ಕಾರ ನೀಡುವ ವೀಸಾದಿಂದ ಪ್ರತಿವರ್ಷ ಸಾವಿರಾರು ಮಂದಿ ನೌಕರರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತದೆ.
ಅತ್ಯಧಿಕ ಪ್ರಮಾಣದಲ್ಲಿ ಬರುವ ಹೊಸ ಅರ್ಜಿಗಳನ್ನು ನಿಭಾಯಿಸುವ ಉದ್ದೇಶದಿಂದ ಸರ್ಕಾರ ಕಳೆದ ಏಪ್ರಿಲ್ ತಿಂಗಳಲ್ಲಿ ಹೆಚ್-1ಬಿ ವೀಸಾ ನೀಡಿಕೆ ಪ್ರಕ್ರಿಯೆಯನ್ನು ಮುಂದಕ್ಕೆ ಹಾಕಿತ್ತು.
ಅಮೆರಿಕಾದ ನಾಗರಿಕತ್ವ ಮತ್ತು ವಲಸೆ ಸೇವೆ ನಿನ್ನೆ ವೀಸಾ ನೀಡಿಕೆಯನ್ನು ಪುನರಾರಂಭಿಸಿದ್ದು, 2018ನೇ ಆರ್ಥಿಕ ವರ್ಷಕ್ಕೆ ಹೆಚ್-1 ಬಿ ವೀಸಾ ನೀಡಿಕೆ ಪ್ರಕ್ರಿಯೆಯಾಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
2018ನೇ ಆರ್ಥಿಕ ವರ್ಷದಲ್ಲಿ 65,000 ವೀಸಾಗಳನ್ನು ನೀಡಲು ಗುರಿ ನಿಗದಿಪಡಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com