ಒಡತಿಯನ್ನು ಮಿಮಿಕ್ರಿ ಮಾಡಿ ಅಮೆಜಾನ್ ನಲ್ಲಿ ಆನ್ ಲೈನ್ ಶಾಂಪಿಗ್ ಮಾಡಿದ ಗಿಳಿ

ಅಮೆಜಾನ್ ನಲ್ಲಿ ಗಿಳಿಯೊಂದು ಸ್ವನಿಯಂತ್ರಿತ ಸ್ಮಾರ್ಟ್ ಸ್ಪೀಕರ್ ನಲ್ಲಿ ತನ್ನ ಒಡತಿಯನ್ನು ಮಿಮಿಕ್ರಿ ಮಾಡುವ ಮೂಲಕ ಶಾಪಿಂಗ್ ಆರ್ಡರ್ ಗಿಟ್ಟಿಸಿಕೊಂಡಿದೆ...
ಗಿಳಿ
ಗಿಳಿ
ಲಂಡನ್: ಅಮೆಜಾನ್ ನಲ್ಲಿ ಗಿಳಿಯೊಂದು ಸ್ವನಿಯಂತ್ರಿತ ಸ್ಮಾರ್ಟ್ ಸ್ಪೀಕರ್ ನಲ್ಲಿ ತನ್ನ ಒಡತಿಯನ್ನು ಮಿಮಿಕ್ರಿ ಮಾಡುವ ಮೂಲಕ ಶಾಪಿಂಗ್ ಆರ್ಡರ್ ಗಿಟ್ಟಿಸಿಕೊಂಡಿದೆ. 
ಲಂಡನ್ ನಲ್ಲಿ ಕೊರಿಯೆನ್ ಪ್ರಟೋರಿಯೆಸ್ ಎಂಬಾಕೆ ಸಾಕಿದ್ದ ಬಡ್ಡಿ ಅನ್ನೊ ಗಿಳಿ ಅಮೆಜಾನ್ ನಲ್ಲಿ 13.50 ಡಾಲರ್ ನ ಗಿಫ್ಟ್ ಬಾಕ್ಸ್ ಗಳನ್ನು ಆರ್ಡರ್ ಮಾಡಿ ಇದೀಗ ಜಗತ್ತಿನಾದ್ಯಂತ ಸುದ್ದಿಯಾಗಿದೆ. 
ಅಮೆಜಾನ್ ನಲ್ಲಿ ಎಕೋ ಸ್ಪೀಕರ್ ನಲ್ಲಿ ಅಲೆಕ್ಸಾ ಎಂದು ಹೇಳಿದರೆ ಸಾಕು ಅದು ಪ್ರತಿಕ್ರಿಯಿಸುತ್ತದೆ. ಸ್ಪೀಕರ್ ಬಳಿ ಕುಳಿತ ಗಿಳಿ ಅಲೆಕ್ಸಾ ಎಂದು ಹೇಳಿದೆ. ಇದಕ್ಕೆ ಪ್ರತಿಕ್ರಿಯೆ ಬರುತ್ತಿದ್ದಂತೆ ಗಿಳಿ ತನ್ನದೇ ಭಾಷೆಯಲ್ಲಿ ಏನೋ ಮಾತನಾಡಿದೆ ಅಸಲಿಗೆ ಗಿಳಿ ತನ್ನ ಒಡತಿಯನ್ನು ಮಿಮಿಕ್ರಿ ಮಾಡಿದೆಯಂತೆ ಹೀಗಾಗಿ ಅಮೆಜಾನ್ ನಲ್ಲಿ ಗಿಫ್ಟ್ ಬಾಕ್ಸ್ ಬುಕ್ ಆಗಿದೆ ಎಂದು ಬ್ರಿಟಿಶ್ ನ್ಯೂಸ್ ಪೇಪರ್ ದಿ ಸನ್ ವರದಿ ಮಾಡಿದೆ. 
ಇನ್ನು ಆನ್ ಲೈನ್ ನಲ್ಲಿ ತಾವು ಸಾಕಿರುವ ಗಿಳಿ ಶಾಪಿಂಗ್ ಮಾಡಿರುವುದನ್ನು ನೋಡಿದ ಮನೆಯವರೆಲ್ಲಾ ತುಂಬಾ ಖುಷಿಯಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com