ಡೊನಾಲ್ಡ್ ಟ್ರಂಪ್ ಜೊತೆ ಮೆಲಾನಿಯಾ ಟ್ರಂಪ್
ಡೊನಾಲ್ಡ್ ಟ್ರಂಪ್ ಜೊತೆ ಮೆಲಾನಿಯಾ ಟ್ರಂಪ್

ಚಂಡಮಾರುತ ಪ್ರದೇಶಕ್ಕೆ ಹೈ ಹೀಲ್ಡ್ ಶೂ ಹಾಕಿಕೊಂಡು ಹೋದ ಮೆಲಾನಿಯಾರನ್ನು ಸಮರ್ಥಿಸಿದ ಡೊನಾಲ್ಡ್ ಟ್ರಂಪ್

ಹಾರ್ವೆ ಚಂಡಮಾರುತದಿಂದ ತತ್ತರಿಸಿಹೋಗಿದ್ದ ಟೆಕ್ಸಾಸ್ ಗೆ ಕಳೆದ ತಿಂಗಳು ಭೇಟಿ ನೀಡಿದ್ದ ಸಂದರ್ಭದಲ್ಲಿ ಹೈ ಹೀಲ್ಡ್ (ಎತ್ತರದ) ಪಾದರಕ್ಷೆ ಧರಿಸಿ ...
Published on
ವಾಷಿಂಗ್ಟನ್: ಹಾರ್ವೆ ಚಂಡಮಾರುತದಿಂದ ತತ್ತರಿಸಿಹೋಗಿದ್ದ ಟೆಕ್ಸಾಸ್ ಗೆ ಕಳೆದ ತಿಂಗಳು ಭೇಟಿ ನೀಡಿದ್ದ ಸಂದರ್ಭದಲ್ಲಿ  ಹೈ ಹೀಲ್ಡ್ (ಎತ್ತರದ) ಪಾದರಕ್ಷೆ ಧರಿಸಿ ಟೀಕೆಗೆ ಗುರಿಯಾಗಿದ್ದ ಮೆಲಾನಿಯಾ ಟ್ರಂಪ್ ಪರವಾಗಿ ಅವರ ಪತಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿದ್ದಾರೆ.
ಕಳೆದ ರಾತ್ರಿ ಅಲಬಾಮಾದಲ್ಲಿ ರ್ಯಾಲಿಯೊಂದರಲ್ಲಿ ಮಾಧ್ಯಮಗಳ ಜೊತೆ ಮಾತನಾಡುವಾಗ ಮೆಲಾನಿಯಾ ಬಗ್ಗೆ ಕೇಳಿಬಂದ ಟೀಕೆಗಳಿಗೆ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.
ಹಲವು ಮಹಿಳೆಯರು ಧರಿಸುವಂತೆ ಮೆಲಾನಿಯಾ ಕೂಡ ಹೈ ಹೀಲ್ಡ್ ಚಪ್ಪಲಿ ಧರಿಸಿದ್ದಾರೆ. ಚಂಡಮಾರುತಕ್ಕೆ ಸಿಲುಕಿದ ಪ್ರದೇಶದ ಜನರನ್ನು ಭೇಟಿ ಮಾಡಲೆಂದು ಮೆಲಾನಿಯಾ ನನ್ನ ಜೊತೆ ಬಂದಿದ್ದಾಗ ಮಾಧ್ಯಮ ಪ್ರತಿನಿಧಿಗಳು ಆಕೆಯನ್ನು ಹಿಂಬಾಲಿಸಿದರು. ಆದರೆ ಅವರಿಗೆ ಅದರ ಉದ್ದೇಶ ಗೊತ್ತಿರಲಿಲ್ಲ. ವಿಮಾನದಿಂದ ಕೆಳಗಿಳಿದ ಮೇಲೆ ಟೆಕ್ಸಾಸ್ ನಲ್ಲಿ ಆಕೆಯ ಬಳಿಯಿದ್ದ ಸ್ನೀಕರ್ ಧರಿಸಿದ್ದರು. ಮಾಧ್ಯಮ ಇದನ್ನು ಜನರ ಮೇಲೆ ಅಗೌರವ ತೋರಿಸಿದ್ದಾರೆ ಎಂದು ವರದಿ ಮಾಡಿದೆ. ಹೈ ಹೀಲ್ಡ್ ಚಪ್ಪಲಿ ಹಾಕಿಕೊಂಡೇ ಮೆಲಾನಿಯಾ ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗುತ್ತಾರೆ ಎಂದು ವ್ಯಂಗ್ಯವಾಗಿ ಟ್ರಂಪ್ ನುಡಿದರು.
ಕಳೆದ ತಿಂಗಳು ಹಾರ್ವೆ ಚಂಡಮಾರುತ ನಂತರ ಟೆಕ್ಸಾಸ್ ಗೆ ಭೇಟಿ ನೀಡುವ ಸಂದರ್ಭದಲ್ಲಿ ಮೆಲಾನಿಯಾ ಟ್ರಂಪ್ ಶ್ವೇತ ಭವನದಿಂದ ಹೈ ಹೀಲ್ಡ್ ಚಪ್ಪಲಿ ಹಾಕಿಕೊಂಡು ಹೋಗಿದ್ದರು.  ಇದು ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿ ಕೆಲವರು ಮೆಲಾನಿಯಾರನ್ನು ಟೀಕಿಸಿದ್ದರು.
ಇದಕ್ಕೆ ಮೆಲಾನಿಯಾ ಸಂವಹನ ನಿರ್ದೇಶಕರು ಮಾಧ್ಯಮಗಳ ಮೇಲೆ ಹರಿಹಾಯ್ದು, ಟೆಕ್ಸಾಸ್ ನಲ್ಲಿ ಭೀಕರ ಚಂಡಮಾರುತ ಬಂದು ಜನ ತತ್ತರಿಸಿ ಹೋಗಿದ್ದಾರೆ. ಆದರೆ ಜನರು ಆಕೆಯ ಶೂ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ ಎಂದಿದ್ದರು.
ಮತ್ತೆ ಎರಡನೇ ಸಲ ಟೆಕ್ಸಾಸ್ ಗೆ ಹೋಗುವಾಗಲೂ ಮೆಲಾನಿಯಾ ಹೈ ಹೀಲ್ಡ್ ಚಪ್ಪಲಿ ಧರಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com