ಟರ್ಕಿ: ಕತ್ತು ಸೀಳಿ ಸಿರಿಯಾ ಪ್ರತಿಪಕ್ಷ ನಾಯಕಿ, ಪುತ್ರಿಯ ಭೀಕರ ಕೊಲೆ

ಟರ್ಕಿಯ ಇಸ್ತಾನ್ ಬುಲ್ ನ ಅಪಾರ್ಟ್ ಮೆಂಟ್ ನಲ್ಲಿ ಸಿರಿಯಾ ಹಿರಿಯ ಪ್ರತಿಪಕ್ಷ ನಾಯಕಿ ಮತ್ತು ಅವರ ಪುತ್ರಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ...
ಒರುಬಾ ಬರಾಕತ್, ಹಲಾಲ
ಒರುಬಾ ಬರಾಕತ್, ಹಲಾಲ
Updated on
ಇಸ್ತಾನ್ ಬುಲ್(ಟರ್ಕಿ): ಟರ್ಕಿಯ ಇಸ್ತಾನ್ ಬುಲ್ ನ ಅಪಾರ್ಟ್ ಮೆಂಟ್ ನಲ್ಲಿ ಸಿರಿಯಾ ಹಿರಿಯ ಪ್ರತಿಪಕ್ಷ ನಾಯಕಿ ಮತ್ತು ಅವರ ಪುತ್ರಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.
1980ರಿಂದಲೂ ಸಿರಿಯಾದ ಆಡಳಿತಾರೂಢ ಬಾತ್ ಪಕ್ಷದ ವಿರೋಧಿಯಾಗಿರುವ ಒರೂಬಾ ಬರಾಕತ್ ಮತ್ತು ಅವರು ಏಕೈಕ ಪುತ್ರಿ ಪತ್ರಕರ್ತೆ ಹಲಾಲ ಬರಾಕತ್ ಅವರ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಲಾಗಿದೆ. 
ಒರೂಬಾ ಬರಾಕತ್ ಅವರಿಗೆ ಬಂಧುಗಳು ಫೋನ್ ಕರೆ ಮಾಡಿದ್ದಾರೆ ಆದರೆ ಯಾರೂ ಉತ್ತರಿಸಿದ್ದಾಗ ಆತಂಕಗೊಂಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಇಸ್ತಾನ್ ಬುಲ್ ಸನಿಹದ ಉಸ್ಕುಡಾರ್ ಪ್ರದೇಶದ ಅಪಾರ್ಟ್ ಮೆಂಟ್ ಗೆ  ಆಗಮಿಸಿ ಪೊಲೀಸರು ಪರಿಶೀಲಿಸಿದಾಗ ಅವರು ಕೊಲೆಯಾಗಿರುವುದು ಪತ್ತೆಯಾಗಿದೆ. 
ತಾಯಿ ಮಗಳ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇನ್ನು ಹಂತಕರ ಪತ್ತೆಗಾಗಿ ಶೋಧ ಕಾರ್ಯ ನಡೆಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com