ಸದ್ಯ ಪಾಕಿಸ್ತಾನ 130 ರಿಂದ 140ರಷ್ಟು ಅಣ್ವಸ್ತ್ರಗಳನ್ನು ಹೊಂದಿದ್ದು ಅವುಗಳ ಸಂಖ್ಯೆಯನ್ನು ಕ್ಷಿಪ್ರ ಗತಿಯಲ್ಲಿ ಹೆಚ್ಚು ಮಾಡುವ ಎಲ್ಲ ಕೆಲಸಗಳನ್ನು ಕೈಗೊಂಡಿದೆ. ಅಷ್ಟೇ ಇಲ್ಲದೇ ಮುಖ್ಯವಾಗಿ ಈ ಅಣ್ವಸ್ತ್ರಗಳನ್ನು ಅಗತ್ಯವಿರುವ ಜಾಗಕ್ಕೆ ಅತ್ಯಂತ ಕ್ಷಿಪ್ರ ಗತಿಯಲ್ಲಿ ಸಾಗಿಸುವ ಪೂರೈಸುವ ಸೌಕರ್ಯಗಳನ್ನು ಕೂಡ ಪಾಕಿಸ್ತಾನ ರೂಪಿಸಿಕೊಂಡಿದೆ ಎಂದು ಅಮೆರಿಕ ಹೇಳಿದ್ದು ಇವು ಪಾಕಿಸ್ತಾನ ಉಗ್ರರ ಕೈವಶವಾಗುವ ಭೀತಿಯನ್ನು ವ್ಯಕ್ತಪಡಿಸಿದೆ.