ಕಂದಹಾರ್‌ನಲ್ಲಿ 12 ಆಫ್ಗಾನ್ ಭದ್ರತಾ ಸಿಬ್ಬಂದಿ ಹತ್ಯೆ

ದಕ್ಷಿಣ ಕಂದಹಾರ್ ನಲ್ಲಿ ತಾಲಿಬಾನ್ ಉಗ್ರರು ಹಾಗೂ ಆಫ್ಗಾನ್ ಭದ್ರತಾ ಸಿಬ್ಬಂದಿ ನಡುವೆ ನಡೆದ ಗುಂಡಿನ ದಾಳಿಯಲ್ಲಿ 12 ಆಫ್ಗಾನ್ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ...
ಆಫ್ಗಾನ್ ಭದ್ರತಾ ಸಿಬ್ಬಂದಿ
ಆಫ್ಗಾನ್ ಭದ್ರತಾ ಸಿಬ್ಬಂದಿ
ಕಾಬೂಲ್: ದಕ್ಷಿಣ ಕಂದಹಾರ್ ನಲ್ಲಿ ತಾಲಿಬಾನ್ ಉಗ್ರರು ಹಾಗೂ ಆಫ್ಗಾನ್ ಭದ್ರತಾ ಸಿಬ್ಬಂದಿ ನಡುವೆ ನಡೆದ ಗುಂಡಿನ ದಾಳಿಯಲ್ಲಿ 12 ಆಫ್ಗಾನ್ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. 
ಮರೂಫ್ ಜಿಲ್ಲೆಯಿಂದ ತಾಲಿಬಾನ್ ಉಗ್ರರನ್ನು ಹೊರಗೆ ಓಡಿಸಲು ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿತ್ತು. ಈ ಗುಂಡಿನ ದಾಳಿಯಲ್ಲಿ 12 ಮಂದಿ ಆಫ್ಗಾನ್ ಯೋಧರು ಮೃತಪಟ್ಟಿರುವುದಾಗಿ ವಕ್ತಾರ ಜಿಯಾ ದುರಾನಿ ಹೇಳಿದ್ದಾರೆ. 
ಮಾರೂಫ್ ಅನ್ನು ತಾಲಿಬಾನ್ ಉಗ್ರರು ಕೈವಶ ಮಾಡಿಕೊಂಡಿದ್ದರು. ಈ ವೇಳೆ ಆಫ್ಗಾನ್ ಭದ್ರತಾ ಸಿಬ್ಬಂದಿಗಳ ಕಾರ್ಯಾಚರಣೆಯಿಂದಾಗಿ ನಾವು ಅಲ್ಲಿಂದ ಹೊರಬಂದೆವು ಎಂದು ತಾಲಿಬಾನ್ ವಕ್ತಾರ ಖಾರಿ ಯೂಸೂಫ್ ಅಹಮ್ಮದಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com