ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಹ್ಯೂಗ್ ಹೆಫ್ನರ್ ಅವರು ತಮ್ಮ ಸ್ವಗೃಹದಲ್ಲಿಯೇ ಕೊನೆಯುಸಿರೆಳೆದಿದ್ದಾರೆಂದು ಪ್ಲೇಬಾಯ್ ಎಂಟರ್ ಪ್ರೈಸಸ್ ಹೇಳಿಕೊಂಡಿದೆ.
2012ರಲ್ಲಿ ಹ್ಯೂಗ್ ಹೆಫ್ನ್ ಅವರು ಭಾರಿ ಸುದ್ದಿಯಲ್ಲಿದ್ದರು. 83ನೇ ವಯಸ್ಸಿನಲ್ಲಿ 23 ವರ್ಷದ ಗರ್ಲ್ ಫ್ರೆಂಡ್ ಕ್ರಿಸ್ಟರ್ ಹ್ಯಾರಿಸ್ ಅವರನ್ನು ತಮ್ಮ ಮೂರನೇ ಮಡದಿಯಾಗಿ ವಿವಾಹವಾಗಿದ್ದರು.
ಹಸಿಬಿಸಿ ಹಾಗೂ ಪ್ರಚೋದನಾಕಾರಿ ಫೋಟೋಗಳನ್ನು ಪ್ರಕಟಿಸುವ ಮೂಲಕವೇ ಮಲ್ಟಿ ಮಿಲಯನ್ ಡಾಲರ್ ಆದಾಯವನ್ನು ಪ್ಲೇಬಾಯ್ ಸಂಪಾದಿಸಿತ್ತು. ತಮ್ಮ ನಿಯತಕಾಲಿಕೆಯಲ್ಲಿ ಪ್ರಕಟಗೊಳ್ಳುತ್ತಿದ್ದ ಫೋಟೋಗಳ ಕುರಿತಂತೆ ಹೆಫ್ನರ್ ಅವರು ಮುಜುಗರವಿಲ್ಲದೆಯೇ ಸಮರ್ಥನೆಗಳನ್ನು ನೀಡುತ್ತಿದ್ದರು.