ಪಿಎಂಎಲ್ ಎನ್ ಪಕ್ಷದ ಅಧ್ಯಕ್ಷರಾಗಿ ಮತ್ತೆ ನವಾಜ್ ಷರೀಫ್ ಆಯ್ಕೆ ಸಾಧ್ಯತೆ!

ಪನಾಮಾ ಸೋರಿಕೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ನಿಂದ ಶಿಕ್ಷೆಗೆ ಗುರಿಯಾಗಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಮತ್ತೆ ಪಿಎಂಎಲ್ ಎನ್ ಪಕ್ಷದ ಅಧ್ಯಕ್ಷಗಾದಿಗೇರುವ ಸಾಧ್ಯತೆ ಇದೆ ಎಂದು ಹೇಳಲಾಗತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ಲಾಮಾಬಾದ್: ಪನಾಮಾ ಸೋರಿಕೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ನಿಂದ ಶಿಕ್ಷೆಗೆ ಗುರಿಯಾಗಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಮತ್ತೆ ಪಿಎಂಎಲ್ ಎನ್ ಪಕ್ಷದ ಅಧ್ಯಕ್ಷಗಾದಿಗೇರುವ ಸಾಧ್ಯತೆ ಇದೆ ಎಂದು ಹೇಳಲಾಗತ್ತಿದೆ.

ಇದೇ ಆಕ್ಟೋಬರ್ 2 ಮತ್ತು ಅಕ್ಟೋಬರ್ 3 ರಂದು ಪಾಕಿಸ್ತಾನ ಮುಸ್ಲಿಂ ಲೀಗ್- ನವಾಜ್ (ಪಿಎಂಎಲ್-ಎನ್) ಪಕ್ಷದ ಸಭೆ ನಡೆಯಲಿದ್ದು, ಸಭೆಯಲ್ಲಿ ನವಾಜ್ ಷರೀಫ್ ಅವರನ್ನೇ ಪಕ್ಷದ ಅಧ್ಯಕ್ಷರಾಗಿ ಆಯ್ಕೆ ಮಾಡಲ ಪಕ್ಷದ  ಪದಾಧಿಕಾರಿಗಳು ಹಾಗೂ ಮುಖಂಡರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಮುಂಬರುವ ಆಕ್ಟೋಬರ್ 2ರಂದು ಪಕ್ಷದ ಸಭೆ ನಡೆಯಲಿದ್ದು ಸಭೆಯಲ್ಲಿ ಪಕ್ಷದ ನೀತಿನಿಯಮಗಳನ್ನೇ ಬದಲಿಸಲು ನಿರ್ಧರಿಸಲಾಗಿದೆ. ಮೂಲಗಳ  ಪ್ರಕಾರ ಪಿಎಂಎಲ್ ಎನ್ ಪಕ್ಷದಲ್ಲಿ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ವ್ಯಕ್ತಿಗೆ ಪಕ್ಷದ ಯಾವುದೇ ರೀತಿಯ ಜವಾಬ್ದಾರಿ ನೀಡಬಾರದು ಎಂಬ ನಿಯಮವಿದ್ದು, ಇದೀಗ ನವಾಜ್ ಷರೀಫ್ ಗಾಗಿ ಈ ನಿಯಮವನ್ನು ಬದಲಿಸಲು  ನಿರ್ಧರಿಸಲಾಗಿದೆ.

ಇದೇ ಕಾರಣಕ್ಕೆ ಅಕ್ಟೋಬರ್ 2ರಂದು ಸಭೆ ನಡೆಸಿ ಅಂದು ನಿಯಮಾವಳಿಯನ್ನು ತಿದ್ದುಪಡಿ ಮಾಡಲಾಗುತ್ತದೆ. ಬಳಿಕ ಮತ್ತೆ ಅಕ್ಟೋಬರ್ 3 ರಂದು ಪಕ್ಷದ ಮಂಡಳೀಯ ಸಭೆಯಲ್ಲಿ ನವಾಜ್ ಷರೀಫ್ ರನ್ನು ಮತ್ತೆ ಪಿಎಂಎಲ್ ಎನ್  ಪಕ್ಷದ ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆ. ಆ ಮೂಲಕ ಪಾಕಿಸ್ತಾನ ರಾಜಕೀಯದಿಂದ ಬಹುತೇಕ ದೂರವಾಗಿದ್ದ ನವಾಜ್ ಷರೀಫ್ ರನ್ನು ಮತ್ತೆ ದೇಶದ ರಾಜಕೀಯಕ್ಕೆ ಹತ್ತಿರವಾಗಿಸಲು ಪಿಎಂಎಲ್ ಎನ್ ಪಕ್ಷ ಯೋಜನೆ ರೂಪಿಸಿದೆ.

ಪನಾಮಾ ಪ್ರಕರಣ ಸಂಬಂಧ ನವಾಜ್ ಷರೀಫ್ ಶಿಕ್ಷೆಗೊಳಗಾಗುತ್ತಿದ್ದಂತೆಯೇ ಸರ್ಕಾರದ ವಿರುದ್ಧ ವಿಪಕ್ಷಗಳು ಕಿಡಕಾರಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com