ನಾಜಿಯಾನ್ ಮತ್ತು ಲಾಲ್ಪುರ್ ಜಿಲ್ಲೆಗಳಲ್ಲಿ ಅಮೆರಿಕ ಹಾಗೂ ಅಫ್ಘಾನಿಸ್ತಾನ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು 22 ಉಗ್ರರನ್ನು ಹತ್ಯೆ ಮಾಡಿದೆ ಎಂದು ಅಫ್ಘಾನಿಸ್ತಾನದ ಪ್ರಾಂತೀಯ ಸರ್ಕಾರಿ ಮಾಧ್ಯಮ ಕಚೇರಿ ಹೇಳಿಕೊಂಡಿದೆ.
ಲಾಲ್ಪುರ್ ಜಿಲ್ಲೆಯ ಬಿಲಾ ಪ್ರದೇಶದಲ್ಲಿ ಅಫಾನಿಸ್ತಾನ ವಿಶೇಷ ಪಡೆ ಶುಕ್ರವಾರ ನಡೆಸಿದ್ದ ದಾಳಿಯಲ್ಲಿ 7 ಪಾಕಿಸ್ತಾನ ಉಗ್ರರನ್ನು ಹತ್ಯೆ ಮಾಡಲಾಗಿತ್ತು. ನಾಜಿನ್ ಜಿಲ್ಲೆಯ ಸ್ಪಿನ್ಜೈ ಪ್ರದೇಶದಲ್ಲಿ ಅಮೆರಿಕಾ ಸೇನಾ ಪಡೆಸಿದ್ದ ವಾಯುಪಡೆ ದಾಳಿಯಲ್ಲಿ 15 ಇಸಿಸ್ ಉಗ್ರರನ್ನು ಹತ್ಯೆ ಮಾಡಿದ್ದಾರೆಂದು ವರದಿಗಳು ತಿಳಿಸಿವೆ.
ವಾಯುಪಡೆ ದಾಳಿಯಲ್ಲಿ 2 ಇಸಿಸ್ ಉಗ್ರ ಸಂಘಟನೆ ಅಡಗುತಾಣಗಳು ಸಂಪೂರ್ಣವಾಗಿ ನಾಶಗೊಂಡಿದೆ ಎಂದು ತಿಳಿದುಬಂದಿದೆ. ನಂಗಾಹಾರ್ ಪ್ರಾಂತ್ರದಲ್ಲಿರುವ ಭಯೋತ್ಪಾದಕರನ್ನು ಮಟ್ಟಹಾಕುವ ಸಲುವಾಗಿ ಇಸಿಸ್ ಉಗ್ರ ಸಂಘಟನೆಯ ವಿರುದ್ದ ಸೇನಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಅಫ್ಘಾನಿಸ್ತಾನದ ಈ ಕಾರ್ಯಾಚರಣೆಗ ಅಮೆರಿಕ ವೈಮಾನಿಕ ಬೆಂಬಲ ಒದಗಿಸುತ್ತಿದೆ.