ಸಿರಿಯಾದಲ್ಲಿ ಮುಂದುವರೆದ ರಕ್ತಸಿಕ್ತ ಅಧ್ಯಾಯ: ರಾಸಾಯನಿಕ ದಾಳಿಗೆ 70 ಮಂದಿ ಬಲಿ

ಸಿರಿಯಾ ದೇಶದಲ್ಲಿ ರಕ್ತಸಿಕ್ತ ಅಧ್ಯಾಯ ಮತ್ತೆ ಮುಂದುವರೆಸಿದ್ದು, ರಾಸಾಯನಿಕ ಬಾಂಬ್ ದಾಳಿಗೆ 70ಕ್ಕೂ ಹೆಚ್ಚು ಮುಗ್ದ ಜನರು ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಡೌಮಾ: ಸಿರಿಯಾ ದೇಶದಲ್ಲಿ ರಕ್ತಸಿಕ್ತ ಅಧ್ಯಾಯ ಮತ್ತೆ ಮುಂದುವರೆಸಿದ್ದು, ರಾಸಾಯನಿಕ ಬಾಂಬ್ ದಾಳಿಗೆ 70ಕ್ಕೂ ಹೆಚ್ಚು ಮುಗ್ದ ಜನರು ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ
ಪಶ್ಚಿಮ ಸಿರಿಯಾದ ಘೋಟ ಎಂಬ ಪ್ರದೇಶದಲ್ಲಿ ರಾಸಾಯನಿಕ ಬಾಂಬ್ ದಾಳಿ ನಡೆದಿರುವುದಾಗಿ ವರದಿಗಳು ತಿಳಿಸಿವೆ. 
ರಾಸಾಯನಿಕ ಬಾಂಬ್ ದಾಳಿಯಲ್ಲಿ 70ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಹೆಲಿಕಾಪ್ಟರ್ ಮೂಲಕ ಈ ದಾಳಿಯನ್ನು ನಡೆಸಲಾಗಿದೆ ಎಂದು ಮಾಧ್ಯಮ ವರದಿಗಳಿ ತಿಳಿಸಿವೆ. 
ದಾಳಿ ಹಿನ್ನಲೆಯಲ್ಲಿ ಸ್ಥಳದಲ್ಲಿ ಅಮೆರಿಕಾ ಮೂಲಕ ಸಂಸ್ಥೆಯೊಂದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಪ್ರಸ್ತುತ ಸ್ಥಳದಲ್ಲಿ ವೈದ್ಯಕೀಯ ನೆರವುಗಳು ಭರದಿಂದ ಸಾಗಿದ್ದು, ಕನಿಷ್ಟ 70 ಮಂದಿ ಸಾವನ್ನಪ್ಪಿದ್ದಾರೆಂದು ಸ್ಥಳೀಯ ಆಸ್ಪತ್ರೆಯ ಸಿಬ್ಬಂದಿಗಳು ದೃಢಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com