ಮದುವೆಗೆ ಗಿಫ್ಟ್ ಬೇಡ, ಅಗತ್ಯವಿರುವವರಿಗೆ ಆರ್ಥಿಕ ನೆರವು ನೀಡಿ: ಪ್ರಿನ್ಸ್ ಹ್ಯಾರಿ-ಮೇಗಾನ್ ಮರ್ಕೆಲ್

ಬ್ರಿಟನ್‌ ರಾಜಕುಮಾರ ಹ್ಯಾರಿ ಮತ್ತು ಅಮೆರಿಕದ ಕಿರುತೆರೆ ನಟಿ ಮೆಗಾನ್ ಮರ್ಕೆಲ್ ಜೋಡಿ ತಮ್ಮ ವಿವಾಹಕ್ಕೆ ಆಗಮಿಸುವವರು ಸಾಂಪ್ರದಾಯಿಕ ಗಿಫ್ಟ್ ನೀಡುವುದರ ಬದಲು, ಅಗತ್ಯವಿರುವ 7 ಸಂಸ್ಥೆಗಳಿಗೆ ಆರ್ಥಿಕ ನೆರವು
ಪ್ರಿನ್ಸ್ ಹ್ಯಾರಿ-ಮೇಗಾನ್ ಮರ್ಕೆಲ್
ಪ್ರಿನ್ಸ್ ಹ್ಯಾರಿ-ಮೇಗಾನ್ ಮರ್ಕೆಲ್
ಲಂಡನ್: ಬ್ರಿಟನ್‌ ರಾಜಕುಮಾರ ಹ್ಯಾರಿ ಮತ್ತು ಅಮೆರಿಕದ ಕಿರುತೆರೆ ನಟಿ ಮೆಗಾನ್ ಮರ್ಕೆಲ್ ಜೋಡಿ ತಮ್ಮ ವಿವಾಹಕ್ಕೆ ಆಗಮಿಸುವವರು ಸಾಂಪ್ರದಾಯಿಕ ಗಿಫ್ಟ್ ನೀಡುವುದರ ಬದಲು, ಅಗತ್ಯವಿರುವ 7 ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಿ ಎಂದು ಕರೆ ನೀಡಿದ್ದಾರೆ. 
ಬ್ರಿಟನ್ ರಾಜಕುಮಾರ ಹ್ಯಾರಿ-ಮರ್ಕೆಲ್ ಜೋಡಿ ಆರ್ಥಿಕ ನೆರವು ನೀಡುವಂತೆ ಕೇಳಿರುವ 7 ಸಂಸ್ಥೆಗಳ ಪೈಕಿ ಮುಂಬೈ ನ ನಗರ ಪ್ರದೇಶದ ಸ್ಲಮ್ ಗಳಲ್ಲಿರುವ ಮಹಿಳೆಯರಿಗೆ ಬೆಂಬಲ ನೀಡುತ್ತಿರುವ ಮೈನಾ ಮಹಿಳಾ ಫೌಂಡೇಶನ್ ಸಹ ಇದೆ.  ಮೈನಾ ಮಹಿಳಾ ಸಂಘಟನೆ ಋತುಚಕ್ರದ ವೇಳೆ ನೈರ್ಮಲ್ಯ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದು, ಅಗತ್ಯವಿರುವ ಮಹಿಳೆಯರಿಗೆ  ಕೈಗೆಟುಕುವ ದರದಲ್ಲಿ ನೈರ್ಮಲ್ಯ ಉತ್ಪನ್ನಗಳನ್ನು ನೀಡುವ ಕೆಲಸ ಮಾಡುತ್ತಿದೆ. 
ನಿಶ್ಚಿತಾರ್ಥದ ನಂತರ ತಮಗೆ ಕೋರಲಾಗಿರುವ ಶುಭಹಾರೈಕೆಗಳಿಗೆ ಪ್ರಿನ್ಸ್ ಹ್ಯಾರಿ ಮತ್ತು ಮೆಗಾನ್ ಮರ್ಕೆಲ್ ಕೃತಜ್ಞರಾಗಿದ್ದು, ವಿವಾಹ ಕಾರ್ಯಕ್ರಮದಲ್ಲಿ ತಮಗೆ ಉಡುಗೊರೆಗಳನ್ನು ನೀಡಲು ಬಯಸುವವರು ಉಡುಗೊರೆ ನೀಡುವ ಬದಲು ಸಮಾಜಕ್ಕಾಗಿ ಕಾರ್ಯನಿರ್ವಹಿಸುತ್ತಿರುವ, ಅಗತ್ಯವಿರುವ ಸಂಘಟನೆಗಳಿಗೆ ಆರ್ಥಿಕ ನೆರವು ನೀಡಲು ಕೋರಿದ್ದಾರೆ. 
ಮೇ.19 ರಂದು ವಿವಾಹವಾಗುತ್ತಿರುವ ಜೋಡಿ , ತಾವೇ 7 ಸಂಸ್ಥೆಗಳನ್ನು ಆಯ್ಕೆ ಮಾಡಿದ್ದಾರೆ.  CHIVA (ಚಿಲ್ಡ್ರನ್ಸ್ ಹೆಚ್ ಐ ವಿ ಅಸೋಸಿಯೇಷನ್), ದಿ ಹೋಮ್ ಲೆಸ್ ಚಾರಿಟಿ ಕ್ರೈಸಿಸ್, ಯೋಧರ ಮಕ್ಕಳಿಗೆ ಸಹಾಯ ಮಾಡುವ ಸ್ಕಾಟಿಸ್ ಲಿಟಲ್ ಸೋಲ್ಜರ್ಸ್, ಕ್ರೀಡೆಗಳ ಮೂಲಕ ಜೀವನವನ್ನು ಬದಲಾವಣೆ ಮಾಡುವುದಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆ ಸ್ಟ್ರೀಟ್ ಗೇಮ್ಸ್,  ಮರೇನ್ ಕನ್ಸರ್ವೇಷನ್ ಚಾರಿಟಿ, ದಿ ದಿ ವೈಲ್ಡರ್ನೆಸ್ ಫೌಂಡೇಶನ್ ಯುಕೆ ಹಾಗೂ ಮುಂಬೈ ನ ಮೈನಾ ಮಹಿಳಾ ಫೌಂಡೇಶನ್ ಹ್ಯಾರಿ ಮತ್ತು ಮೇಗಾನ್ ಮರ್ಕೆಲ್  ಆಯ್ಕೆ ಮಾಡಿರುವ ಸಂಸ್ಥೆಗಳಾಗಿವೆ. 
2017 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ  ಪ್ರಿನ್ಸ್ ಹ್ಯಾರಿ-ಮೇಗಾನ್ ಮರ್ಕೆಲ್ ಜೋಡಿ ಮುಂಬೈ ನ ಮೈನಾ ಮಹಿಳಾ ಫೌಂಡೇಶನ್ ನ ಸ್ಥಾಪಕರಾದ ಸುಹಾನಿ ಜಲೋಟಾ ಅವರನ್ನು ಭೇಟಿ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com