ಬಳಕೆದಾರರ ಡೇಟಾ ಸಿಎ ಜೊತೆ ಹಂಚಿಕೆಯಾಗಿತ್ತೇ ಇಲ್ಲವೇ ಎಂಬ ಬಗ್ಗೆ ಹೇಳಲಿದೆ ಫೇಸ್ ಬುಕ್!

ಡಾಟಾ ಸೋರಿಕೆಯ ವಿಷಯವಾಗಿ ವಿಶ್ವಾದ್ಯಂತ ಟೀಕೆಗೆ ಗುರಿಯಾಗಿರುವ ಫೇಸ್ ಬುಕ್, ಭಾರತದ ಬಳಾಕೆದಾರರೂ ಸೇರಿದಂತೆ 87 ಮಿಲಿಯನ್ ಬಳಕೆದಾರರ ಮಾಹಿತಿ ಕೇಂಬ್ರಿಡ್ಜ್ ಅನಾಲಿಟಿಕಾ ಜೊತೆ
ಫೇಸ್ ಬುಕ್
ಫೇಸ್ ಬುಕ್
ನವದೆಹಲಿ: ಡಾಟಾ ಸೋರಿಕೆಯ ವಿಷಯವಾಗಿ ವಿಶ್ವಾದ್ಯಂತ ಟೀಕೆಗೆ ಗುರಿಯಾಗಿರುವ ಫೇಸ್ ಬುಕ್, ಭಾರತದ ಬಳಾಕೆದಾರರೂ ಸೇರಿದಂತೆ 87 ಮಿಲಿಯನ್ ಬಳಕೆದಾರರ ಮಾಹಿತಿ ಕೇಂಬ್ರಿಡ್ಜ್ ಅನಾಲಿಟಿಕಾ ಜೊತೆ ಹಂಚಿಕೆಯಾಗಿತ್ತೇ ಇಲ್ಲವೇ ಎಂಬ ಬಗ್ಗೆ  ಏ.09 ರಂದು ಬಳಕೆದಾರರಿಗೆ ಮಾಹಿತಿ ನೀಡಲಿದೆ. 
ಕೇಂಬ್ರಿಡ್ಜ್ ಅನಾಲಿಟಿಕಾ ದೊಂದಿಗೆ ಬಳಕೆದಾರರ ಮಾಹಿತಿ ಹಂಚಿಕೆಯಾಗಿರುವ ಸಾಧ್ಯತೆ ಇದ್ದರೆ ಅಲರ್ಟ್ ನೀಡುವ ಮೂಲಕ ಫೇಸ್ ಬುಕ್ ಮಾಹಿತಿ ನೀಡಲಿದ್ದು, ಬಳಕೆದಾರರ ನ್ಯೂಸ್ ಫೀಡ್ ನಲ್ಲಿ ಫೇಸ್ ಬುಕ್ ಯಾವೆಲ್ಲಾ ಆಪ್  ಬಳಕೆ ಮಾಡುತ್ತಿದೆ ಹಾಗೂ ಆಪ್ ಗಳೊಂದಿಗೆ ಹಂಚಿಕೆ ಮಾಡಿಕೊಂಡಿರುವ ಮಾಹಿತಿಯ ಬಗ್ಗೆಯೂ ವಿವರಣೆ ನೀಡಲಿದೆ. 
ಇದೇ ನ್ಯೂಸ್ ಫೀಡ್ ನಲ್ಲಿ ಕೇಂಬ್ರಿಡ್ಜ್ ಅನಾಲಿಟಿಕಾದೊಂದಿಗೆ ಬಳಕೆದಾರರ ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತೋ ಇಲ್ಲವೋ ಎಂಬ ಬಗ್ಗೆಯೂ ಫೇಸ್ ಬುಕ್ ತಿಳಿಸಲಿದ್ದು ಫೇಸ್ ಬುಕ್ ಬಳಕೆದಾರರಿಗೆ ಸಾಮಾಜಿಕ ಜಾಲತಾಣಾ ಮಾಹಿತಿಯನ್ನು ಹಂಚಿಕೊಂಡಿದ್ದ ಆಪ್ ಗಳಿಗೆ ಸಂಬಂಧಿಸಿದಂತೆ ಲಿಂಕ್ ಬರಲಿದ್ದು, ಆ ಆಪ್ ಗಳೊಂದಿಗೆ ಸಾಮಾಜಿಕ ಜಾಲತಾಣ ಯಾವ ರೀತಿಯ ಮಾಹಿತಿಗಳನ್ನು ಹಂಚಿಕೊಂಡಿದೆ ಎಂಬುದೂ ತಿಳಿಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com