ಕೇಂಬ್ರಿಜ್ ಅನಲಿಟಿಕಾ ಜತೆ ತನ್ನ ಮಾಹಿತಿಯನ್ನೂ ಹಂಚಿಕೊಳ್ಳಲಾಗಿದೆ: ಫೇಸ್ ಬುಕ್ ಸಿಇಒ ಜುಕರ್‌ಬರ್ಗ್‌

ಸಾಮಾಜಿಕ ಮಾದ್ಯಮಗಲಲ್ಲಿ ಉದ್ಯಮಗಳ ನಿಯಂತ್ರಣವಿರುತ್ತದೆ, ಇದು ಅನಿವಾರ್ಯ ಎಂದು ನಾನು ಭಾವಿಸುತ್ತೇನೆ.ಫೆಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ಹೇಳಿದ್ದಾರೆ.
ಫೇಸ್ ಬುಕ್ ಸಿಇಒ ಜುಕರ್‌ಬರ್ಗ್‌
ಫೇಸ್ ಬುಕ್ ಸಿಇಒ ಜುಕರ್‌ಬರ್ಗ್‌
Updated on
ವಾಷಿಂಗ್ ಟನ್: ಸಾಮಾಜಿಕ ಮಾದ್ಯಮಗಲಲ್ಲಿ ಉದ್ಯಮಗಳ ನಿಯಂತ್ರಣವಿರುತ್ತದೆ, ಇದು ಅನಿವಾರ್ಯ ಎಂದು ನಾನು ಭಾವಿಸುತ್ತೇನೆ.ಫೆಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌  ಹೇಳಿದ್ದಾರೆ.
ಮೇಲ್ವಿಚಾರಣೆ ಸಮಿತಿ ಎದುರು ಹೇಳಿಕೆ ನಿಡುವ ಸಮಯದಲ್ಲಿ ಜುಕರ್‌ಬರ್ಗ್‌  ಈ ಮಾತು ಹೇಳಿದ್ದು ಮೂರನೇ ಪಕ್ಷಗಳಿಗೆ ಮಾರಾಟವಾದ ವೈಯಕ್ತಿಕ ಮಾಹಿತಿಯಲ್ಲಿ ತನ್ನ ವೈಯುಕ್ತಿಕ ಮಾಹಿತಿಯೂ ಸೇರ್ಪಡೆಯಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ.
"ಅಂತರ್ಜಾಲವು ಜನರ ಜೀವನದಲ್ಲಿ ಜಾಗತಿಕ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ. ಆದರೆ ಕೆಲವೊಂದು ನಿಯಂತ್ರಣಕ್ಕೆ ಒಳಪಡುವುದು ಅನಿವಾರ್ಯವಾಗುತ್ತದೆ. ನಾನು ಯಾವ ನಿಯಂತ್ರಣಕ್ಕೆ ಹೊರತಾದವನೆಂದು ಬಾವಿಸಲಾರೆ. ಆದರೆ ನಿಮ್ಮ ನಿಯಂತ್ರಣಗಳಲ್ಲಿ ನೀವು ಇರಬೇಕು" ಹೌಸ್ ಎನರ್ಜಿ ಹಾಗೂ ವಾಣಿಜ್ಯ ಸಮಿತಿಯ ಮುಂದೆ ಸಾಕ್ಷ್ಯದ ಸಂದರ್ಭದಲ್ಲಿ ಜುಕರ್‌ಬರ್ಗ್‌  ಹೇಳಿದರು.
ಫೇಸ್ ಬುಕ್ ನಂತಹಾ ದೊಡ್ಡ ಸಂಸ್ಥೆಗಳು ಸರ್ಕಾರದ ನಿಯಂತ್ರಣದ ಜತೆಗೆ ಸಾಕಷ್ಟು ಸಂಪನ್ಮೂಲವನ್ನು ಹೊಂದಿದೆ. ಆದರೆ ಇದನ್ನು  ಸಣ್ಣ ಉದ್ಯಮ, ಅಥವಾ ಸ್ಟಾರ್ಟ್ ಅಪ್ ಗಳಿಗೆ ಅಳವಡಿಸಿಕೊಳ್ಳುವುದು ಕಷ್ಟಸಾಧ್ಯವಾಗಲಿದೆ. ಅವರು ಹೇಳಿದರು.
ಎರಡೂ ಪಕ್ಷಗಳಲ್ಲೂ ಕಾನೂನು ಸಮ್ಮತಿಸುವವರು ಫೇಸ್ ಬುಕ್ ಹಾಗು ಇತರ ಟೆಕ್ ಕಂಪೆನಿಗಳ ಸಂಭವನೀಯ ನಿಯಂತ್ರಣವನ್ನು ಗೌಪ್ಯತೆ ಹಗರಣಗಳ ಹಾಗೂ ರಷ್ಯಾದ ಹಸ್ತಕ್ಷೇಪದ ನಡುವೆ ತಾಳೆ ಹಾಕುತ್ತಿದ್ದಾರೆ.ಇದು ಹೇಗೆನ್ನುವುದನ್ನು  ಜುಕರ್‌ಬರ್ಗ್‌  ನಿಶ್ಚಿತವಾಗಿ ವಿವರಿಸಲಿಲ್ಲ.
ಕೇಂಬ್ರಿಜ್ ಅನಲಿಟಿಕಾ ಹಗರಣದ ಬಗ್ಗೆ  ಶಾಸಕರ ಸಮಿತಿಯ ಮುಂದೆ ಜುಕರ್‌ಬರ್ಗ್‌  ರೆಪ್ ಅನ್ನಾ ಇಶೂ, ಡಿ-ಕ್ಯಾಲಿಫ್ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com