ನನ್ನ ಸರ್ಕಾರ ಭಾರತವನ್ನು ಪರಿವರ್ತಿಸಲಿದೆ: ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ 3 ದೇಶಗಳ 5 ದಿನಗಳ ಪ್ರವಾಸವನ್ನು ಮಂಗಳವಾರ ಸ್ವೀಡನ್ ನಿಂದ ಆರಂಭಿಸಿದ್ದು, ನನ್ನ ಸರ್ಕಾರ ಭಾರತವನ್ನು ಪರಿವರ್ತಿಸಲಿದೆ ಎಂದು ಮಂಗಳವಾರ ಹೇಳಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
ಸ್ವೀಡನ್; ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ 3 ದೇಶಗಳ 5 ದಿನಗಳ ಪ್ರವಾಸವನ್ನು ಮಂಗಳವಾರ ಸ್ವೀಡನ್ ನಿಂದ ಆರಂಭಿಸಿದ್ದು, ನನ್ನ ಸರ್ಕಾರ ಭಾರತವನ್ನು ಪರಿವರ್ತಿಸಲಿದೆ ಎಂದು ಮಂಗಳವಾರ ಹೇಳಿದ್ದಾರೆ. 
ಸ್ವೀಡನ್'ನ ಸ್ಟಾಕ್ಹೋಮ್ ವಿಶ್ವವಿದ್ಯಾಲಯದಲ್ಲಿ ಅನಿವಾಸಿಯ ಭಾರತೀಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ನನ್ನ ಸರ್ಕಾರ ಭಾರತವನ್ನು ಪರಿವರ್ತಿಸಲಿದೆ ಎಂದು ಹೇಳಿದ್ದಾರೆ. ಅಲ್ಲದೆ, ನವಭಾರತ ನಿರ್ಮಾಣಕ್ಕೆ ಬಿಜೆಪಿ ನೇತೃತ್ವದ ಎನ್'ಡಿಎ ಸರ್ಕಾರ ತೆಗೆದುಕೊಂದಿರುವ ಕ್ರಮಗಳ ಕುರಿತಂತೆ ವಿವರಿಸಿದ್ದಾರೆ.
ನಮ್ಮ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳು ಸುಧಾರಣೆಗಾಗಿ ಅಲ್ಲ, ಪರಿವರ್ತನೆಗಾಗಿ ಆಗಿದೆ. ಇದು ನಮ್ಮ ಭರವಸೆ. ನಾವು ಭಾರತವನ್ನು ಪರಿವರ್ತಿಸುತ್ತೇವೆ. ಸಾಗುವ ರಸ್ತೆಗಳು ಮುಂದಿದೆ. ಆದರೆ, ನಾವು ನಮ್ಮ ದೃಷ್ಟಿ ಹಾಗೂ ಹೃದಯದಲ್ಲಿ ಧ್ಯೇಯವನ್ನು ಹೊಂದಿದ್ದೇವೆಂದು ತಿಳಿಸಿದ್ದಾರೆ. 
ಭಾರತ ಒಂದು ದೊಡ್ಡ ಬದಲಾವಣೆಯ ಮೂಲಕ ಸಾಗುತ್ತಿದೆ. ಭಾರತದ ವರ್ಚಸ್ಸು, ಸ್ವಾಭಿಮಾನ ಹಾಗೂ ಭಾರತವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಸಲುವಾಗಿ ಸರ್ಕಾರ ಹಗಲು ರಾತ್ರಿ ಕೆಲಸ ಮಾಡುತ್ತಿದೆ. 4 ವರ್ಷಗಳ ಹಿಂದೆ ನಮಗೆ ಸಬ್ ಕಾ ಸಾಥ್ ಸಬ್ ಕಾ ವಕಾಸ್'ಗೆ ಜನಾದೇಶ ಸಿಕ್ಕಿತ್ತು. ನವ ಭಾರತ ನಿರ್ಮಾಣಕ್ಕೆ ನಾವು ಶ್ರಮ ಪಡುತ್ತಿದ್ದೇವೆ. ಕಳೆದ ನಾಲ್ಕು ವರ್ಷಗಳಲ್ಲಿ ವಿಶ್ವದಲ್ಲಿ ಭಾರತದ ಬಗ್ಗೆಯಿದ್ದ ನಂಬಿಕೆ ಹಾಗೂ ವಿಶ್ವಾಸವನ್ನು ಹೆಚ್ಚಿಸಿದ್ದೇವೆ. ಇದು ವಿಶ್ವವು ಭಾರತವನ್ನು ನಂಬಿಕಸ್ಥ ದೇಶದಂತೆ ನೋಡುತ್ತಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com