ಲಂಡನ್: ಬಸವೇಶ್ವರ ಪುತ್ಥಳಿಗೆ ಪ್ರಧಾನಿ ಮೋದಿ ಪುಷ್ಪ ನಮನ

ಬ್ರಿಟನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬಸವ ಜಯಂತಿ ಪ್ರಯುಕ್ತ ಲಂಡನ್ ....
ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಲಂಡನ್: ಬ್ರಿಟನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬಸವ ಜಯಂತಿ ಪ್ರಯುಕ್ತ ಲಂಡನ್ ನಲ್ಲಿರುವ ವಿಶ್ವಗುರು ಬಸವೇಶ್ವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ಇಂದು ಪ್ರಧಾನಿ ಮೋದಿ ಬ್ರಿಟನ್ ಸಂಸತ್‌ ಭವನದ ಎದುರುಗಡೆ ಥೇಮ್ಸ್‌ ನದಿ ದಂಡೆಯಲ್ಲಿ ಸ್ಥಾಪಿತವಾಗಿರುವ ಜಗಜ್ಯೋತಿ ಬಸವೇಶ್ವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಲಂಡನ್ ಬಸವೇಶ್ವರ ಪ್ರತಿಷ್ಠಾನ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸದರು.
ಇದಕ್ಕು ಮುನ್ನ ಕನ್ನಡದಲ್ಲೇ ಬಸವ ಜಯಂತಿ ಶುಭಾಶಯ ಕೋರಿ ಟ್ವೀಟ್ ಮಾಡಿದ್ದ ಮೋದಿ, ಭಗವಾನ್ ಬಸವೇಶ್ವರರಿಗೆ ಅವರ ಜಯಂತಿಯಂದು ನಾನು ತಲೆ ಬಾಗುತ್ತೇನೆ. ನಮ್ಮ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಅವರು ಕೇಂದ್ರ ಸ್ಥಾನ ಅಲಂಕರಿಸುತ್ತಾರೆ. ಸಾಮಾಜಿಕ ಸೌಹಾರ್ದ, ಸಹೋದರತ್ವ, ಏಕತೆ ಹಾಗೂ ಸಹಾನುಭೂತಿಗೆ ಅವರು ನೀಡಿದ ಪ್ರಾಮುಖ್ಯತೆ ನಮಗೆ ಸದಾ ಪ್ರೇರಣೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com