ಅಣ್ವಸ್ತ್ರ, ಖಂಡಾಂತರ ಕ್ಷಿಪಣಿಗಳ ಇನ್ನಷ್ಟು ಪರೀಕ್ಷೆ ಅಗತ್ಯವಿಲ್ಲ; ಉತ್ತರ ಕೊರಿಯಾ ಸರ್ವಾಧಿಕಾರಿ ಘೋಷಣೆ

ಯುದ್ಧೋನ್ಮಾದ ಪ್ರದರ್ಶಿಸುತ್ತಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಮಾಡಲು ನಿರ್ಧರಿಸಿರುವ ಬೆನ್ನಲ್ಲೇ, ಪರಮಾಣು ಮತ್ತು ಖಂಡಾಂತರ ಕ್ಷಿಪಣಿಗಳ ಪರೀಕ್ಷೆಗಳನ್ನು ನಡೆಸುವುದಿಲ್ಲ...
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್
ಸಿಯೋಲ್: ಯುದ್ಧೋನ್ಮಾದ ಪ್ರದರ್ಶಿಸುತ್ತಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಮಾಡಲು ನಿರ್ಧರಿಸಿರುವ ಬೆನ್ನಲ್ಲೇ, ಪರಮಾಣು ಮತ್ತು ಖಂಡಾಂತರ ಕ್ಷಿಪಣಿಗಳ ಪರೀಕ್ಷೆಗಳನ್ನು ನಡೆಸುವುದಿಲ್ಲ ಎಂದು ಉತ್ತರ ಕೊರಿಯಾ ಶನಿವಾರ ಘೋಷಣೆ ಮಾಡಿದೆ. 
ಪರಮಾಣು ಪರೀಕ್ಷಾ ಕೇಂದ್ರವನ್ನು ಬಂದ್ ಮಾಡುವುದಾಗಿ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಅವರು ಘೋಷಣೆ ಮಾಡಿದ್ದಾರೆ. 
ಅಣ್ವಸ್ತ್ರ, ಖಂಡಾಂತರ ಕ್ಷಿಪಣಿಗಳ ಪರೀಕ್ಷೆಗಳ ಅಗತ್ಯವಿಲ್ಲ. ಹೀಗಾಗಿ ಇಂದಿನಿಂದಲೇ ನ್ಯೂಕ್ಲಿಯನ್ ಟೆಸ್ಟ್ ಗಳನ್ನು ನಿಲ್ಲಿಸುವುದಾಗಿ ಕಿಮ್ ಜಾಂಗ್ ಉನ್ ತಿಳಿಸಿದ್ದಾರೆ. 
ಉತ್ತರ ಕೊರಿಯಾದ ನಿರ್ಧಾರವನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಅವರು ಸ್ವಾಗತಿಸಿದ್ದು, ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಇದೊಂದು ಉತ್ತಮ ಸುದ್ದಿ ಎಂದಿರುವ ಟ್ರಂಪ್ ಅವರು, ಶೃಂಗಸಭೆಗಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ. 
ಪರಮಾಣು ಹಾಗೂ ಕ್ಷಿಪಣಿ ಪರೀಕ್ಷೆಗಳನ್ನು ನಿಲ್ಲಿಸಿರುವುದು ದೊಡ್ಡ ಪ್ರಗತಿಯಾಗಿದ್ದು, ಉತ್ತರ ಕೊರಿಯಾ ಹಾಗೂ ವಿಶ್ವಕ್ಕೆ ಇದೊಂದು ಅತ್ಯುತ್ತಮ ಸುದ್ದಿ ಎಂದು ಟ್ರಂಪ್ ಬಣ್ಣಿಸಿದ್ದಾರೆ.
ಏಪ್ರಿಲ್ 27 ರಂದು ಕಿಮ್ ಜಾಂಗ್ ಉನ್ ಶೃಂಗಸಭೆಯನ್ನು ಕರೆದಿದ್ದು, ಈ ಶೃಂಗಸಭೆಯಲ್ಲಿ ಟ್ರಂಪ್ ಅವರು ಭಾಗಿಯಾಗಲಿದ್ದಾರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com