ಹೆಚ್-1ಬಿ ಪತಿ, ಪತ್ನಿ ವೀಸಾ ಅನುಮತಿ ರದ್ದುಗೊಳಿಸಲು ಡೊನಾಲ್ಡ್ ಟ್ರಂಪ್ ಆಡಳಿತ ಚಿಂತನೆ

ಅಮೆರಿಕಾದಲ್ಲಿ ಕಾನೂನು ಬದ್ಧವಾಗಿ ವಾಸಿಸಲು ಅವಕಾಶ ಕಲ್ಪಿಸುವ ಹೆಚ್ -1ಬಿ ಪತಿ, ಪತ್ನಿ ವೀಸಾದಾರರಿಗೆ ಅನುಮತಿ ರದ್ದುಗೊಳಿಸಲು ಡೊನಾಲ್ಡ್ ಟ್ರಂಪ್ ಆಡಳಿತ ಚಿಂತನೆ ನಡೆಸಿದೆ.
ವೀಸಾ ಚಿತ್ರ
ವೀಸಾ ಚಿತ್ರ

ವಾಷಿಂಗ್ಟನ್ : ಅಮೆರಿಕಾದಲ್ಲಿ ಕಾನೂನು ಬದ್ಧವಾಗಿ ವಾಸಿಸಲು ಅವಕಾಶ ಕಲ್ಪಿಸುವ ಹೆಚ್ -1ಬಿ  ಪತಿ, ಪತ್ನಿ ವೀಸಾದಾರರಿಗೆ  ಅನುಮತಿ ರದ್ದುಗೊಳಿಸಲು ಡೊನಾಲ್ಡ್  ಟ್ರಂಪ್ ಆಡಳಿತ  ಚಿಂತನೆ ನಡೆಸಿದೆ.

ಡೊನಾಲ್ಡ್ ಟ್ರಂಪ್ ಸರ್ಕಾರದ ಈ ನಡೆ  ಸಾವಿರಾರು ಭಾರತೀಯರ ಮೇಲೆ ವಿನಾಶಕಾರಿ ಪರಿಣಾಮ ಬೀರಲಿದೆ ಎಂದು ಕಾನೂನು ತಜ್ಞರಿಗೆ  ಪೆಢರಲ್ ಏಜೆನ್ಸಿಯ ಅಧಿಕಾರಿಗಳು ತಿಳಿಸಿದ್ದಾರೆ.

 ಇದು ಏನಾದರೂ ಜಾರಿಗೆ ಬಂದಲ್ಲೀ ಒಬಾಮಾ ಮಾಡಿದ್ದ ಕಾನೂನು ರದ್ದುಗೊಂಡು ಅನುಮತಿ ಪಡೆದಿರುವ ಸುಮಾರು 70, 000ಕ್ಕೂ ಹೆಚ್ಚು ಹೆಚ್- 4 ವೀಸಾದಾರರ ಮೇಲೆ ಪರಿಣಾಮ ಬೀರಲಿದೆ.

 ಹೆಚ್ -1ಬಿ ವೀಸಾ ಹೊಂದಿರುವ ಪತಿ, ಪತ್ನಿಯರಿಗೆ ಹೆಚ್-4 ವೀಸಾ ನೀಡಲಾಗುತ್ತದೆ. ಭಾರತದಿಂದ ವಲಸೆ ಹೋಗಿರುವ ಅನೇಕ ಮಂದಿ ಅತ್ಯುತ್ತಮ ಕೌಶಾಲ್ಯಾಧಾರಿತ ವೃತಿವರ್ಗ  ಅಮೆರಿಕದಲ್ಲಿದ್ದು, ಭಾರತ-ಅಮೆರಿಕಾದವರು ಈ ವಿನಾಯಿತಿಯ ಫಲಾನುಭವಿಯಾಗಿದ್ದಾರೆ.

 ಈ ಕಾನೂನಡಿ 100,100 ಕ್ಕೂ ಹೆಚ್ಚು ಹೆಚ್-4 ವೀಸಾದಾರರು ಫಲಾನುಭವಿಯಾಗಿದ್ದಾರೆ.2015ರಲ್ಲಿ ಕಾನೂನು ಜಾರಿಗೊಳಿಸಿದ್ದ ಒಬಾಮಾ ಆಡಳಿತ ಪತಿ, ಪತ್ನಿಯ ಕೆಲಸಕ್ಕೆ ಅನುಮತಿ ನೀಡಲಾಗಿತ್ತು. ನೌಕರಿ ಇಲ್ಲದೆ ಇರುವ ಇತರರಿಗೆ ಶಾಶ್ವತ  ನಾಗರಿಕ ಸ್ಥಾನಮಾನ ನೀಡುವ ಪ್ರಕ್ರಿಯೆ ದಶಕಗಳಿಂದಲೂ ನಡೆಯುತ್ತಲೇ ಇದೆ. ಈ ವಿನಾಯಿತಿಯನ್ನು ವಜಾಗೊಳಿಸಲು ಟ್ರಂಪ್ ಆಡಳಿತ ಚಿಂತನೆ ನಡೆಸಿದೆ.

ಈ ಬೇಸಿಗೆಯ ನಂತರ  ಇದು ಜಾರಿಯಾಗುವ ಸಾಧ್ಯತೆ ಇದೆ ಎಂದು ಅಮೆರಿಕ ನಾಗರಿಕ ಮತ್ತು ವಲಸೆ ಸೇವಾ ವಿಭಾಗದ ನಿರ್ದೇಶಕ ಫ್ರಾಂಸಿಸ್ ಕಿಸ್ನಾ ಹೇಳಿದ್ದಾರೆ. ಹೆಚ್ -4 ಅವಲಂಬಿತ ಪತಿ. ಪತ್ನಿಯರ ವೀಸಾ ರದ್ದುಗೊಳಿಸುವ ಪ್ರಸ್ತಾವ ಸೇರಿದಂತೆ ಹಲವು ಚಿಂತನೆಗಳಿರುವುದಾಗಿ ಅವರು ತಿಳಿಸಿದ್ದಾರೆ.

 ಇತ್ತೀಚಿನ ವಲಸೆ ನೀತಿ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ 71 ಸಾವಿರಕ್ಕೂ ಹೆಚ್ಚು ಪತಿ, ಪತ್ನಿಯ ಹೆಚ್-1ಬಿ ವೀಸಾ ಹೊಂದಿದ್ದಾರೆ. ಈ ಪೈಕಿ ಶೇ.90 ರಷ್ಟು ಮಂದಿ ಭಾರತೀಯರೇ ಆಗಿದ್ದಾರೆ.

2017 ರಿಂದಲೂ ಕೆಲಸ ಮಾಡುತ್ತಿರುವ ಹೆಚ್- 4 ಪತಿ , ಪತ್ನಿ ವೀಸಾದಾರರಲ್ಲಿ ಶೇ, 94 ರಷ್ಟು ಮಂದಿ ಮಹಿಳೆಯರೇ ಆಗಿದ್ದಾರೆ. ಇದರಲ್ಲಿ ಶೇ.93 ರಷ್ಟು ಭಾರತೀಯರೇ ಆಗಿದ್ದರೆ, ಉಳಿದವರು ಚೀನಾಕ್ಕೆ ಸೇರಿದ್ದಾರೆ ಎಂದು ಅಧ್ಯಯನ ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com