ಕೆನಡಾ: ಉದ್ದೇಶಪೂರ್ವಕವಾಗಿ ಪಾದಚಾರಿಗಳ ಮೇಲೆ ವ್ಯಾನ್ ಚಾಲನೆ; 10 ಸಾವು, 16 ಮಂದಿಗೆ ಗಾಯ

ಶಂಕಾಸ್ಪದ ವ್ಯಾನ್ ವೊಂದು ಪಾದಾಚಾರಿಗಳ ಮೇಲೆ ಉದ್ದೇಶಪೂರ್ವಕವಾಗಿ ಹರಿದ ಪರಿಣಾಮ ಕನಿಷ್ಠ 10 ಪಾದಾಚಾರಿಗಳು ಸಾವನ್ನಪ್ಪಿ 16 ಮಂದಿ ಗಾಯಗೊಂಡಿರುವ ಘಟನೆ ಕೆನಡಾದ ಟೊರಂಟೋದಲ್ಲಿ ನಡೆದಿದೆ.
ಪಾದಾಚಾರಿ ಮಾರ್ಗದ ಮೇಲೆ ವ್ಯಾನ್ ಹರಿಸಿದ ಆಗಂತುಕ
ಪಾದಾಚಾರಿ ಮಾರ್ಗದ ಮೇಲೆ ವ್ಯಾನ್ ಹರಿಸಿದ ಆಗಂತುಕ
ಟೊರಂಟೊ: ಶಂಕಾಸ್ಪದ ವ್ಯಾನ್ ವೊಂದು ಪಾದಾಚಾರಿಗಳ ಮೇಲೆ ಉದ್ದೇಶಪೂರ್ವಕವಾಗಿ ಹರಿದ ಪರಿಣಾಮ ಕನಿಷ್ಠ 10 ಪಾದಾಚಾರಿಗಳು ಸಾವನ್ನಪ್ಪಿ 16 ಮಂದಿ ಗಾಯಗೊಂಡಿರುವ ಘಟನೆ ಕೆನಡಾದ ಟೊರಂಟೋದಲ್ಲಿ ನಡೆದಿದೆ.
ರಸ್ತೆಯಲ್ಲಿದ್ದ ವ್ಯಾನ್ ಅನ್ನು ವಾಹನ ಚಾಲಕ ಉದ್ದೇಶಪೂರ್ವಕವಾಗಿಯೇ ಏಕಾಏಕಿ ಪಾದಚಾರಿ ಮಾರ್ಗದ ಮೇಲೆ ಹರಿಸಿದ್ದಾನೆ. ಪರಿಣಾಮ ಪಾದಾಚಾರಿ ಮಾರ್ಗದಲ್ಲಿದ್ದ ಸುಮಾರು 10 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲದೆ 16 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಭಾರತೀಯ ಕಾಲಮಾನ ಪ್ರಕಾರ ಸೋಮವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದು,  ವ್ಯಾನ್ ಅನ್ನು ಬಾಡಿಗೆ ಪಡೆದು ಪಾದಾಚಾರಿಗಳ ಮೇಲೆ ನುಗ್ಗಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ಬಳಿಕ ಪರಾರಿಯಾಗುತ್ತಿದ್ದ ಆಗಂತುಕ ಚಾಲಕನನ್ನು ಕಾರ್ಯಾಚರಣೆ ನಡೆಸಿ ಪೊಲೀಸರು ಬಂಧಿಸಿದ್ದು, ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಇನ್ನು ಘಟನೆ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಟೊರಂಟೋ ಪೊಲೀಸರು, ಇದೊಂದು ಉದ್ದೇಶಪೂರ್ವಕ ಕೃತ್ಯ ಎಂಬುದು ದೃಡಪಟ್ಟಿದೆ. ಆದರೆ, ಘಟನೆ ಹಿಂದೆ ಭಯೋತ್ಪಾದಕರ ಕೈವಾಡ ಇರುವ ಸಾಧ್ಯತೆ ಇಲ್ಲ ಎಂದು ತಿಳಿಸಿದ್ದಾರೆ. ಸದ್ಯ ನಗರ ಸುರಕ್ಷಿತವಾಗಿದೆ ಎಂದು ಮುಖ್ಯಸ್ಥ ಮಾರ್ಕ್‌ ಸಾಂಡರ್ಸ್‌ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com