9 ಸಾವಿರ ನೇಪಾಳಿ ವಲಸೆಗಾರರಿಗೆ ವಿಶೇಷ ಭದ್ರತೆ ರದ್ದುಗೊಳಿಸಲು ಟ್ರಂಪ್ ಆಡಳಿತ ನಿರ್ಧಾರ

9 ಸಾವಿರ ನೇಪಾಳಿ ವಲಸೆಗಾರರಿಗೆ ತಾತ್ಕಾಲಿಕ ಭದ್ರತೆ ಮಾನ್ಯತೆಯನ್ನು ರದ್ದುಗೊಳಿಸಲು ಟ್ರಂಪ್ ಆಡಳಿತ ನಿರ್ಧರಿಸಿದ್ದು, ಅಮೆರಿಕಾ ಬಿಡುವಂತೆ ಅಥವಾ ಕ್ರಮಬದ್ಧ ಪರಿವರ್ತನೆಯ ಮೂಲಕ ನೆಲೆಸುವಂತೆ ಸೂಚಿಸಲಾಗಿದೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ ಟನ್ : 9 ಸಾವಿರ ನೇಪಾಳಿ ವಲಸೆಗಾರರಿಗೆ ತಾತ್ಕಾಲಿಕ ಭದ್ರತೆ ಮಾನ್ಯತೆಯನ್ನು ರದ್ದುಗೊಳಿಸಲು ಟ್ರಂಪ್ ಆಡಳಿತ ನಿರ್ಧರಿಸಿದ್ದು, ಅಮೆರಿಕಾ ಬಿಡುವಂತೆ ಅಥವಾ  ಕ್ರಮಬದ್ಧ ಪರಿವರ್ತನೆಯ ಮೂಲಕ  ನೆಲೆಸುವಂತೆ ಸೂಚಿಸಲಾಗಿದೆ.

ಮಾನವ ಸಂಘರ್ಘ, ನೈಸರ್ಗಿಕ ವಿಪತ್ತು, ಭೂಕಂಪ ಮತ್ತಿತರ ಅವಘಡಗಳ  ಸಂದರ್ಭಗಳಲ್ಲಿ ಪ್ರಜೆಗಳನ್ನು  ಕಾಪಾಡಿ,  ಸುರಕ್ಷಿತವಾಗಿ ಸಾಗಿಸಲು ತಾತ್ಕಾಲಿಕ ರಕ್ಷಣಾ ವ್ಯವಸ್ಥೆ ನೀಡಲಾಗುತ್ತದೆ.

ಟ್ರಂಪ್ ಆಡಳಿತದ ನೀತಿಯಿಂದಾಗಿ  ನೇಪಾಳದಲ್ಲಿ ವಾಸಿಸುತ್ತಿರುವ 8,950 ನಾಗರಿಕರ ಮೇಲೆ ಪರಿಣಾಮ ಬೀರಲಿದೆ.  ಅವರೆಲ್ಲೂ ಮರಳಿ ನೇಪಾಳಕ್ಕೆ ಹಿಂತಿರಬೇಕಾಗಿದೆ. ಅಥವಾ ಗಡೀಪಾರು ಮಾಡಬೇಕಾಗುತ್ತದೆ ಎಂದು ಸೂಚನೆ ನೀಡಲಾಗಿದೆ

 ಆದಾಗ್ಯೂ,  ಟರ್ಮಿನಟ್ ನಿರ್ಧಾರವನ್ನು 12 ತಿಂಗಳ ಕಾಲ ವಿಳಂಬ ಮಾಡಲಾಗುತ್ತಿದೆ. ಜೂನ್.24 2019 ರಿಂದ ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ ಎಂದು ಹೋಮ್ ಲ್ಯಾಂಡ್ ಭದ್ರತಾ ಕಾರ್ಯದರ್ಶಿ ಕ್ರಿಸ್ಟ್ ಜೈನ್ ನೀಲ್ಸನ್ ತಿಳಿಸಿದ್ದಾರೆ.

ನೈಸರ್ಗಿಕ  ವಿಪತ್ತು ಸಂಬಂಧಿತ  ಪರಿಸ್ಥಿತಿ ಹಿನ್ನೆಲೆಯಲ್ಲಿ ಮೂಲ ನಿವಾಸಿಗಳಿಗೆ ರಕ್ಷಣೆ ಒದಗಿಸಲು  ನೇಪಾಳಿ ವಲಸಿಗರಿಗೆ ವಿಶೇಷ ಭದ್ರತಾ ವ್ಯವಸ್ಥೆ ರದ್ದುಗೊಳಿಸುವ ನಿರ್ಧಾರ  ಕೈಗೊಳ್ಳಲಾಗಿದೆ ಎಂಬುದು ತಿಳಿದುಬಂದಿದೆ.


 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com