ಪಾಕಿಸ್ತಾನಕ್ಕೆ ಮತ್ತೊಂದು ಸಂಕಷ್ಟ: ಅಮೆರಿಕದಿಂದ ಸಿಗುತ್ತಿದ್ದ ಭದ್ರತಾ ನೆರವಿಗೆ ಕತ್ತರಿ!

ಅಮೆರಿಕ ಕಾಂಗ್ರೆಸ್ ನ್ಯಾಷನಲ್ ಡಿಫೆನ್ಸ್ ಆಥರೈಸೇಷನ್ ಕಾಯ್ದೆ-2019 (ಎನ್ ಡಿಎಎ-19) ನ್ನು ಅನುಮೋದಿಸಿದ್ದು, ಪಾಕಿಸ್ತಾನಕ್ಕೆ ಮತ್ತಷ್ಟು ಹೊಡೆತ ಬಿದ್ದಿದೆ.
ಪಾಕಿಸ್ತಾನಕ್ಕೆ ಮತ್ತೊಂದು ಸಂಕಷ್ಟ: ಅಮೆರಿಕದಿಂದ ಸಿಗುತ್ತಿದ್ದ ಭದ್ರತಾ ನೆರವಿಗೆ ಕತ್ತರಿ!
ಪಾಕಿಸ್ತಾನಕ್ಕೆ ಮತ್ತೊಂದು ಸಂಕಷ್ಟ: ಅಮೆರಿಕದಿಂದ ಸಿಗುತ್ತಿದ್ದ ಭದ್ರತಾ ನೆರವಿಗೆ ಕತ್ತರಿ!
ವಾಷಿಂಗ್ ಟನ್: ಅಮೆರಿಕ ಕಾಂಗ್ರೆಸ್  ನ್ಯಾಷನಲ್ ಡಿಫೆನ್ಸ್ ಆಥರೈಸೇಷನ್ ಕಾಯ್ದೆ-2019 (ಎನ್ ಡಿಎಎ-19) ನ್ನು ಅನುಮೋದಿಸಿದ್ದು, ಪಾಕಿಸ್ತಾನಕ್ಕೆ ಮತ್ತಷ್ಟು ಹೊಡೆತ ಬಿದ್ದಿದೆ. 
ಎನ್ ಡಿಎಎ ಅಡಿಯಲ್ಲಿ ಪ್ರತಿ ವರ್ಷ ಪಾಕಿಸ್ತಾನಕ್ಕೆ 750 ಮಿಲಿಒಯನ್ ಡಾಲರ್ ನಷ್ಟು ಹಣ ಸಿಗುತ್ತಿತ್ತು. ಆದರೆ ಈ ಬಾರಿ ಅದನ್ನು 150 ಮಿಲಿಯನ್ ಡಾಲರ್ ಗೆ ಸೀಮಿತಗೊಳಿಸಲಾಗಿದೆ. ಪ್ರತಿ ಬಾರಿ ಹಕ್ಕಾನಿ ಉಗ್ರರು, ತಾಲೀಬಾನ್ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪಾಕಿಸ್ತಾನಕ್ಕೆ ಭರಪೂರ ಹಣ ನೀಡುತ್ತಿದ್ದ ಅಮೆರಿಕ ಕಾಂಗ್ರೆಸ್ ಈ ಬಾರಿ ಈ ರೀತಿಯ ನಿಯಮಗಳನ್ನೇನೂ ವಿಧಿಸದೇ ಭದ್ರತಾ ನೆರವಿಗೆ ಕತ್ತರಿ ಹಾಕಿದೆ ಎಂಬುದು ವಿಶೇಷ. 
ಅಮೆರಿಕದ ಈ ನಡೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಒಬಾಮಾ ಅವರ ಅವಧಿಯಲ್ಲಿ ಶ್ವೇತ ಭವನದ ಭದ್ರತಾ ಪರಿಷತ್ ನ ಸದಸ್ಯರಾಗಿದ್ದ ಜೋಶುವಾ ವೈಟ್, ಅಮೆರಿಕ ಪಾಕಿಸ್ತಾನಕ್ಕೆ ನೀಡುತ್ತಿರುವ ಸೇನಾ ಆರ್ಥಿಕ ಸಹಾಯಕ್ಕೆ ಕಡಿವಾಣ ಹಾಕಿದಂತಾಗಿದೆ. 
ಅಮೆರಿಕ ಪಾಕ್ ಗೆ ನೀಡುತ್ತಿದ್ದ ಆರ್ಥಿಕ ಸಹಕಾರಕ್ಕೆ ಕತ್ತರಿ ಹಾಕಿರುವುದರಿಂದ ಒಕ್ಕೂಟದ ಬೆಂಬಲ ನಿಧಿ(ಸಿಎಸ್ ಎಫ್) ನ್ನು ಪಡೆಯುವುದಕ್ಕೆ ಪಾಕಿಸ್ತಾನ ಅರ್ಹವಾಗಿರುವುದಿಲ್ಲ. ಆದರೆ ಮತ್ತೊಂದು ರೀತಿಯಲ್ಲಿ ಗಡಿ ಭದ್ರತೆಯನ್ನು ಹೆಚ್ಚಿಸುವುದಕ್ಕಾಗಿ ಪಾಲುದಾರ ರಾಷ್ಟ್ರಗಳಿಗೆ ನೀಡಲಾಗುವ ನೆರವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಿರುತ್ತದೆ, ಆದ್ದರಿಂದ ಇದು ಪಾಕಿಸ್ತಾನಕ್ಕೆ ಮಿಶ್ರ ಪರಿಣಾಮ ಬೀರಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com