

ವಾಷಿಂಗ್ಟನ್ : ಅಮೆರಿಕಾದ ಕಾಂಗ್ರೆಸ್ ಗೆ ಮೊದಲ ಬಾರಿಗೆ ಮುಸ್ಲಿಂ ಮಹಿಳೆಯೊಬ್ಬರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಮಿಚಿಗನ್ ಕ್ಷೇತ್ರದಿಂದ 42 ವರ್ಷದ ಮುಸ್ಲಿಂ ಮಹಿಳೆಯ ಅವಿರೋಧ ಆಯ್ಕೆಗೆ ಡೆಮಾಕ್ರಟಿಕ್ ಪಕ್ಷ ನಾಮನಿರ್ದೇಶನಗೊಳಿಸಿದೆ.
ಮಿಚಿಗನ್ ನ ಮಾಜಿ ಅಮೆರಿಕಾ ಪ್ರತಿನಿಧಿ ಜಾನ್ ಕನಾಯರ್ಸ್ ಜೂನಿಯರ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ನಾಮನಿರ್ದೇಶನಕ್ಕಾಗಿ ನಡೆದ ಹೋರಾಟದಲ್ಲಿ ಮಾಜಿ ರಾಜ್ಯ ಪ್ರತಿನಿಧಿ ರಶಿದಾ ಟಿಲೈಬ್ ಗೆಲುವು ಸಾಧಿಸಿದ್ದಾರೆ ಎಂದು ಡೆಟ್ರಾಯಿಟ್ ನ್ಯೂಸ್ ವರದಿ ಮಾಡಿದೆ.
ಡೆಮೋಕ್ರಾಟಿಕ್-ಲೀನಿಂಗ್ ಜಿಲ್ಲೆಯಲ್ಲಿ ರಿಪಬ್ಲಿಕ್ ಪಕ್ಷಕ್ಕೆ ಸ್ಥಾನ ಇಲ್ಲ ಹೀಗಾಗಿ ಪ್ಯಾಲೆಸ್ತೇನ್ ಮೂಲದ ಟಿಲೈಬ್ ಆಯ್ಕೆ ಬಹುತೇಕ ನವೆಂಬರ್ ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಖಚಿತ ಎನ್ನಲಾಗುತ್ತಿದೆ.
ಟಿಲೈಬ್ ಶೇ.33.2 ರಷ್ಟು ಮತಗಳನ್ನು ಪಡೆದಿದ್ದರೆ ಡೆಟ್ರಾಯಿಟ್ ಸಿಟಿ ಕೌನ್ಸಿಲ್ ಅಧ್ಯಕ್ಷ ಬ್ರೆಂಡಾ ಜೋನ್ಸ್ ಶೇ.29.2 ರಷ್ಟು ಮತಗಳನ್ನು ಪಡೆದುಕೊಂಡಿದ್ದಾರೆ. ತಳಮಟ್ಟದಲ್ಲಿ ಆಕೆ ಪ್ರಚಾರ ಕೈಗೊಂಡಿದ್ದು, ಮತದಾರರೊಂದಿಗೆ ಮಾತುಕತೆ ವೇಳೆಯಲ್ಲಿ ಅವರು ಸ್ಪೂರ್ತಿಗೊಂಡಿರುವುದಾಗಿ ತಿಳಿಸಿದ್ದಾರೆ ಎಂದು ವರದಿ ಮಾಡಲಾಗಿದೆ.
ಟಿಲೈಬ್ 2009 ರಿಂದ 2014ರವರೆಗೂ ಮಿಚಿಗನ್ ಹೌಸ್ ನಿಂದ ಸೇವೆ ಸಲ್ಲಿಸಿದ್ದಾರೆ. 2008ರಲ್ಲಿ ರಾಜ್ಯ ಶಾಸಕಾಂಗಕ್ಕೆ ಮೊದಲ ಬಾರಿಗೆ ಪ್ರವೇಶಿಸಿದ್ದರು. ಆಕೆ ವಕೀಲೆ ಹಾಗೂ ಸಮುದಾಯ ಹೋರಾಟಗಾರ್ತಿಯಾಗಿದ್ದಾರೆ.