ಗುಂಡಿಟ್ಟು ಪಾಕಿಸ್ತಾನಿ ನಟಿ ಹಾಗೂ ಗಾಯಕಿ ರೇಷ್ಮಾ ಹತ್ಯೆ

ಪಾಕಿಸ್ತಾನಿ ನಟಿ ಹಾಗೂ ಗಾಯಕಿ ರೇಷ್ಮಾ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ, ಆಕೆಯ ಪತಿಯೇ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ,. ..
ರೇಷ್ಮಾ
ರೇಷ್ಮಾ
ಕೇಬರ್ ಪಕ್ತುಂಕಾ:  ಪಾಕಿಸ್ತಾನಿ ನಟಿ ಹಾಗೂ ಗಾಯಕಿ ರೇಷ್ಮಾ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ, ಆಕೆಯ ಪತಿಯೇ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ,. ಪಾಕಿಸ್ತಾನದ ಕೇಬರ್ ಫಂಕ್ತಂವಾ ದಲ್ಲಿ ಹತ್ಯೆ ನಡೆದಿದೆ
ಹಕೀಮಾಬಾದ್ ಏರಿಯಾದಲ್ಲಿ ರೇಷ್ಮಾ ತನ್ನ ಸಹೋದರನೊಂದಿಗೆ ವಾಸಿಸುತ್ತಿದ್ದಳು, ಆಕೆಯ ಪತಿಗೆ ರೇಷ್ಮಾ 4ನೇ ಪತ್ನಿಯಾಗಿದ್ದಳು,  ಇಬ್ಬರು ಜಗಳವಾಡಿಕೊಂಡಿದ್ದರು, ಹೀಗಾಗಿ ಆತನೇ ರೇಷ್ಮಾ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ, ಶೂಟ್ ಮಾಡಿದ ನಂತರ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನಿಗಾಗಿ ಶೋಧ ನಡೆಸಿದ್ದಾರೆ. ಗಾಯಕಿಯಾಗಿ ಗುರುತಿಸಿಕೊಂಡಿದ್ದ ರೇಷ್ಮಾ, ಪ್ರಸಿದ್ಧ ಪಾಕಿಸ್ತಾನ ಡ್ರಾಮಾ ಜೋಬಲ್ ಗಲೌನದಲ್ಲಿ ಕೆಲಸ ಮಾಡುತ್ತಿದ್ದಳು, ಈ ವರ್ಷ ಪಾಕಿಸ್ತಾನದಲ್ಲಿ ಮಹಿಳಾ ಕಲಾವಿದೆಯರ ಮೇಲೆ ನಡೆದಿರುವ 15ನೇ ದಾಳಿ ಇದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com