ಚೀನಾದ ರಹಸ್ಯ ರಾಜಕೀಯ ಕ್ಯಾಂಪ್ ಗಳಲ್ಲಿ ಲಕ್ಷಾಂತರ ಉಯ್ಘರ್ ಮುಸ್ಲಿಮರ ಸೆರೆ: ವಿಶ್ವಸಂಸ್ಥೆ ವರದಿ

ಚೀನಾದ ರಹಸ್ಯ ರಾಜಕೀಯ ಕ್ಯಾಂಪ್ ಗಳಲ್ಲಿ ಲಕ್ಷಾಂತರ ಉಯ್ಘರ್ ಮುಸ್ಲಿಮರನ್ನು ಹಿಡಿದಿಡಲಾಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಹೇಳಿದೆ.
ಚೀನಾದ ರಹಸ್ಯ ರಾಜಕೀಯ ಕ್ಯಾಂಪ್ ಗಳಲ್ಲಿ ಲಕ್ಷಾಂತರ ಉಯ್ಘರ್  ಮುಸ್ಲಿಮರ ಸೆರೆ: ವಿಶ್ವಸಂಸ್ಥೆ ವರದಿ
ಚೀನಾದ ರಹಸ್ಯ ರಾಜಕೀಯ ಕ್ಯಾಂಪ್ ಗಳಲ್ಲಿ ಲಕ್ಷಾಂತರ ಉಯ್ಘರ್ ಮುಸ್ಲಿಮರ ಸೆರೆ: ವಿಶ್ವಸಂಸ್ಥೆ ವರದಿ
Updated on
ಚೀನಾದ ರಹಸ್ಯ ರಾಜಕೀಯ ಕ್ಯಾಂಪ್ ಗಳಲ್ಲಿ ಲಕ್ಷಾಂತರ ಉಯ್ಘರ್ ಮುಸ್ಲಿಮರನ್ನು ಹಿಡಿದಿಡಲಾಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಹೇಳಿದೆ. 
ಚೀನಾದ ಈ ಕೃತ್ಯದ ಬಗ್ಗೆ ತನ್ನ ಬಳಿ ವಿಶ್ವಾಸಾರ್ಹ ವರದಿಗಳಿವೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿ ಹೇಳಿದ್ದು, ಈ ಕ್ಯಾಂಪ್ ಗಳು ಕಾರಾಗೃ ಕ್ಯಾಂಪ್ ಗಳನ್ನು ಹೋಲುತ್ತವೆ ಎಂದು ಆತಂಕ ವ್ಯಕ್ತಪಡಿಸಿವೆ. 
ವಿಶ್ವಸಂಸ್ಥೆಯ ಮಾನವಹಕ್ಕುಗಳ ಜನಾಂಗೀಯ ತಾರತಮ್ಯ ನಿಗ್ರಹ ವಿಭಾಗದ ಸದಸ್ಯರಾಗಿರುವ ಗೇ ಮೆಕ್ಡೊಗಾಲ್ ಪ್ರಕಾರ 2 ಮಿಲಿಯನ್ ಗೂ ಉಯ್ಘರ್ ಹಾಗೂ ಮುಸ್ಲಿಂ ಅಲ್ಪಸಂಖ್ಯಾತರು  ರಹಸ್ಯ ಕ್ಯಾಂಪ್ ಗಳಲ್ಲಿದ್ದಾರೆ.  ವಿಶ್ವಸಂಸ್ಥೆಯ ಈ ಹೇಳಿಕೆಗೆ ಚೀನಾದ ಅಧಿಕಾರಿಗಳಿಂದ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. 
ಉಯ್ಘರ್, ಮುಸ್ಲಿಂ ಅಲ್ಪಸಂಖ್ಯಾತರೆಡೆಗಿನ ತನ್ನ ಈ ನೀತಿಗಳನ್ನು ಕೊನೆಗೊಳಿಸುವಂತೆ ಚೀನಾಗೆ ಕರೆ ನೀಡುತ್ತೇವೆ ಎಂದು ವಿಶ್ವಸಂಸ್ಥೆ ಹೇಳಿದೆ. 

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com