ಹೆಲಿಕಾಪ್ಟರ್ ರೆಕ್ಕೆ ಬಡಿದು ಭಾರತೀಯ ಕೈಲಾಸ-ಮಾನಸ ಸರೋವರ ಯಾತ್ರಿಕನ ದುರಂತ ಸಾವು

ದುರಂತದ ಪ್ರಕರಣವೊಂದರಲ್ಲಿ ಕೈಲಾಸ-ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಭಾರತ ಮೂಲದ ಯಾತಾರ್ಥಿಯೊಬ್ಬರ ತಲೆ ಹೆಲಿಕಾಪ್ಟರ್ ರೆಕ್ಕೆಗೆ ಸಿಲುಕಿ ಕತ್ತರಿಸಿ ಹೋಗಿರುವ ಘಟನೆ ನೇಪಾಳದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕಠ್ಮಂಡು: ದುರಂತದ ಪ್ರಕರಣವೊಂದರಲ್ಲಿ ಕೈಲಾಸ-ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಭಾರತ ಮೂಲದ ಯಾತಾರ್ಥಿಯೊಬ್ಬರ ತಲೆ ಹೆಲಿಕಾಪ್ಟರ್ ರೆಕ್ಕೆಗೆ ಸಿಲುಕಿ ಕತ್ತರಿಸಿ ಹೋಗಿರುವ ಘಟನೆ ನೇಪಾಳದಲ್ಲಿ ನಡೆದಿದೆ.
ನೇಪಾಳದ ಹಿಲ್ಸಾ ಪ್ರಾಂತ್ಯದ ಕೈಲಾಸ-ಮಾನಸ ಸರೋವರ ಯಾತ್ರಾರ್ಥಿಗಳ ಶಿಬಿರದಲ್ಲಿರುವ ಹೆಲಿಪ್ಯಾಡ್ ನಲ್ಲಿ ಈ ದುರಂತ ಸಂಭವಿಸಿದ್ದು, ಹೆಲಿಕಾಪ್ಟರ್ ಎಂಜಿನ್ ಚಾಲನೆಯಲ್ಲಿರುವಾಗಲೇ ಯಾತ್ರಾರ್ಥಿಗಳನ್ನು ಇಳಿಸಲಾಗಿದೆ. ಈ ವೇಳೆ ಭಾರತ ಮೂಲದ 42 ವರ್ಷದ ನಾಗೇಂದ್ರ ಕುಮಾರ್ ಕಾರ್ತಿಕ್ ಮೆಹ್ತಾ ಎಂಬುವವರು ಬಗ್ಗಿಕೊಂಡು ಬರದೇ ನೇರವಾಗಿ ನಿಂತ ಕೂಡಲೇ ಹೆಲಿಕಾಪ್ಟರ್ ನ ರೆಕ್ಕೆ ಅವರ ತಲೆಯನ್ನು ಸೀಳಿಕೊಂಡು ಹೋಗಿದೆ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 
ನಾಗೇಂದ್ರ ಕುಮಾರ್ ಅವರು ಮೂಲತಃ ಮುಂಬೈ ಮೂಲದವರಾಗಿದ್ದು, ಪ್ರಸ್ತುತ ತಾತ್ಕಾಲಿಕವಾಗಿ ಹಿಲ್ಸಾ ಶಿಬಿರದಲ್ಲಿ ಹೆಲಿಕಾಪ್ಚರ್ ಸೇವೆಯನ್ನು ರದ್ದುಗೊಳಿಸಲಾಗಿದೆ. ಅಂತೆಯೇ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ದುರಂತದಲ್ಲಿ ಹೆಲಿಕಾಪ್ಟರ್ ನ ರೆಕ್ಕೆಗೂ ಹಾನಿಯಾಗಿದ್ದು, ದುರಂತಕ್ಕೀಡಾದ ಹೆಲಿಕಾಪ್ಟರ್ ಸೇವೆಯನ್ನು ರದ್ದುಗೊಳಿಸಲಾಗಿದೆ.
ಇನ್ನು ಕೈಲಾಸ-ಮಾನಸ ಸರೋವರ ಯಾತ್ರಾರ್ಥಿಗಳಿ ಪ್ರಯಾಣಿಕ್ಕೆ ಹೆಲಿಕಾಪ್ಟರ್ ಸೇವೆಯೊಂದನ್ನೇ ನೆಚ್ಚಿಕೊಳ್ಳಲಾಗಿದ್ದು, ಇಲ್ಲಿ ರಸ್ತೆ ಮಾರ್ಗ ಅತ್ಯಂತ ದುರ್ಗಮವಾಗಿದೆ. ಪ್ರತೀ ವರ್ಷ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಿಂದೂಗಳು, ಬೌದ್ಧರು ಮತ್ತು ಜೈನರು ಯಾತ್ರೆ ಕೈಗೊಳ್ಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com