ಅಪೌಷ್ಟಿಕ ಶಿಶುವಿಗೆ ಸ್ತನ್ಯಪಾನ ಮಾಡಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿಗೆ ಬಡ್ತಿ!

ಅಪೌಷ್ಟಿಕತೆ ಎಂದು ನಿರ್ಲಕ್ಷ್ಯ ಮಾಡಿದ ಮಗುವಿಗೆ ಸ್ತನ್ಯಪಾನ ಮಾಡಿಸಿದ್ದ ಅರ್ಜೇಂಟಿನಾದ ಪೊಲೀಸ್ ಅಧಿಕಾರಿಯೊಬ್ಬರಿಗೆ ಬಡ್ತಿ ನೀಡಲಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬ್ಯೂನಸ್ ಐರಿಸ್: ಅಪೌಷ್ಟಿಕತೆ ಎಂದು ನಿರ್ಲಕ್ಷ್ಯ ಮಾಡಿದ ಮಗುವಿಗೆ ಸ್ತನ್ಯಪಾನ ಮಾಡಿಸಿದ್ದ ಅರ್ಜೇಂಟಿನಾದ ಪೊಲೀಸ್ ಅಧಿಕಾರಿಯೊಬ್ಬರಿಗೆ ಬಡ್ತಿ ನೀಡಲಾಗಿದೆ. 
ಮಹಿಳಾ ಪೊಲೀಸ್ ಅಧಿಕಾರಿ ಸೆಲೆಸ್ಟ್ ಅಯಲಾ ಸೋರ್ ಮರಿಯಾ ಲುಡೋವಿಕಾ ಮಕ್ಕಳ ಆಸ್ಪತ್ರೆಯಲ್ಲಿ ಗಾರ್ಡ್ ಕೆಲಸ ಮಾಡುತ್ತಿದ್ದರು. ಆಕೆ ಅಪೌಷ್ಠಿಕತೆಯಿಂದ ಬಳಲುತ್ತಿದ್ದ ಮಗುವಿಗೆ ಸ್ತನ್ಯಪಾನ ಮಾಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. 
ಹಸಿವಿನಿಂದ ಮಗು ಅಳುತ್ತಿದ್ದುದ್ದನ್ನು ಕಂಡ ಮರುಗಿದ ಸೆಲೆಸ್ಟ್ ಮಗುವಿಗೆ ಸ್ತನ್ಯಪಾನ ಮಾಡಿಸಬಹುದಾ ಎಂದು ಆಸ್ಪತ್ರೆಯ ಸಿಬ್ಬಂದಿಯನ್ನು ಕೇಳಿಕೊಂಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಅನುಮತಿ ನೀಡದ ಕೂಡಲೇ ಸೆಲೆಸ್ಟ್ ಸ್ತನ್ಯಪಾನ ಮಾಡಿಸಲು ಶುರು ಮಾಡಿದ ತಕ್ಷಣ ಮಗು ಸುಮ್ಮನಾಯಿತು. 
ಸೆಲೆಸ್ಟ್ ಮಗುವಿಗೆ ಸ್ತನ್ಯಪಾನ ಮಾಡಿಸುತ್ತಿರುವ ಫೋಟೋವನ್ನು ಅವರ ಸಹೋದ್ಯೋಗಿಗಳು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಸೆಲೆಸ್ಟ್ ರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com