ಪಾಕಿಸ್ತಾನದ ದೇವಾಲಯದಲ್ಲಿ ಹಿಂದೂ ಮಕ್ಕಳಿಗೆ ಮುಸ್ಲಿಂ ಮಹಿಳೆಯಿಂದ ಶಿಕ್ಷಣ ಪಾಠ!

ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನದಲ್ಲಿ ಹಿಂದೂಗಳ ವಿರುದ್ಧ ದೌರ್ಜನ್ಯ ನಡೆಯುತ್ತಿರುವ ವಿಚಾರ ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತಿರುತ್ತದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಕರಾಚಿ: ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನದಲ್ಲಿ ಹಿಂದೂಗಳ ವಿರುದ್ಧ ದೌರ್ಜನ್ಯ ನಡೆಯುತ್ತಿರುವ ವಿಚಾರ ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತಿರುತ್ತದೆ. 
ಆದರೆ ಪಾಕಿಸ್ತಾನದ ಕರಾಚಿಯ ಬಸ್ತಿ ಗುರು ಪ್ರದೇಶದಲ್ಲಿರುವ ದೇವಾಲಯದಲ್ಲಿ ಮುಸ್ಲಿಂ ಮಹಿಳೆ ಅನುಂ ಅಗಾ ವಿದ್ಯಾರ್ಥಿಗಳಿಗೆ ಶಿಕ್ಷಣ, ಆರೋಗ್ಯ ಮತ್ತು ಅಲ್ಪಸಂಖ್ಯಾತ ಸಮುದಾಯದ ಹಕ್ಕುಗಳ ಬಗ್ಗೆ ಅರಿವು, ಶಿಕ್ಷಣ ನೀಡುತ್ತಿದ್ದಾರೆ. ಈ ಪ್ರದೇಶದಲ್ಲಿ 80-90 ಹಿಂದೂ ಕುಟುಂಬಗಳು ಇವೆ. ತೀರಾ ಇಕ್ಕಟ್ಟಾಗಿರುವ ಈ ಸ್ಥಳ ಭೂಗಳ್ಳರ ಕೆಂಗಣ್ಣಿಗೆ ಕೂಡ ಗುರಿಯಾಗಿದೆ. 
ಹಿಂದೂ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಅನುಂ ಅಗಾ ಅವರು ಸಲಾಂ ಎಂದರೆ ಜೈ ಶ್ರೀರಾಮ್ ಎಂದು ಪ್ರತಿಕ್ರಿಯೆ ನೀಡುತ್ತಾರೆ. ನಮ್ಮ ಶಾಲೆ ದೇವಾಲಯದ ಒಳಗೆ ಇದೆ ಎಂದು ಹೇಳಿದರೆ ಅಶ್ಚರ್ಯಪಡುತ್ತಾರೆ. ಬೇರೆ ಎಲ್ಲಿಯೂ ಸ್ಥಳದ ಅವಕಾಶ ಇಲ್ಲದೇ ಇರುವುದರಿಂದ ಇಲ್ಲಿಯೇ ತರಗತಿ ನಡೆಸಬೇಕಾಗಿದೆ ಎಂದು ಅಗಾ ಹೇಳುತ್ತಾರೆ. 
ಇನಿಶಿಯೇಟರ್ ಹ್ಯೂಮನ್ ಡೆವಲಪ್ ನೆಂಟ್ ಫೌಂಡೇಷನ್ ಎಂಬ ಸಂಘಟನೆಯ ನಾಯಕ ಆರೀಫ್ ಹಬೀಬ್ ಅನುಂ ಆಗಾರನ್ನು ದೇವಾಲಯದಲ್ಲಿ ತರಗತಿ ನಡೆಸಲು ನೇಮಿಸಿದ್ದರು. 
ನಾಲ್ಕು ವರ್ಷಗಳ ಅವಧಿಯಲ್ಲಿ ಇಲ್ಲಿ ನೆಲೆಸಿರುವ ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿ ಇಲ್ಲಿಂದ ತೆರಳುವಂತೆ ಎಚ್ಚರಿಕೆ ನೀಡಿದ್ದ ಘಟನೆಗಳು ನಡೆದಿವೆ ಎನ್ನುತ್ತಾರೆ ಸಮುದಾಯದ ಮುಖಂಡ ಶಿವ ಧರಣಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com