ವಿಯೆಟ್ನಾಂ: ಭಾರತ ರಾಯಭಾರ ಕಛೇರಿಯಲ್ಲಿ ಮಹಾತ್ಮಾ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸುಷ್ಮಾ ಸ್ವರಾಜ್

ವಿಯೆಟ್ನಾಂ ರಾಜಧಾನಿ ಹನೋಯಿಯಲ್ಲಿನ ಭಾರತೀಯ ರಾಯಭಾರಿ ಕಛೇರಿಯಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಇಂದು ಉದ್ಘಾಟಿಸಿದರು.
ಭಾರತ ರಾಯಭಾರ ಕಛೇರಿಯಲ್ಲಿ ಮಹಾತ್ಮಾ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸುಷ್ಮಾ ಸ್ವರಾಜ್
ಭಾರತ ರಾಯಭಾರ ಕಛೇರಿಯಲ್ಲಿ ಮಹಾತ್ಮಾ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸುಷ್ಮಾ ಸ್ವರಾಜ್
ಹನೋಯಿ: ವಿಯೆಟ್ನಾಂ ರಾಜಧಾನಿ ಹನೋಯಿಯಲ್ಲಿನ ಭಾರತೀಯ ರಾಯಭಾರಿ ಕಛೇರಿಯಲ್ಲಿ ಮಹಾತ್ಮಾ ಗಾಂಧಿ ಪುತ್ಥಳಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಇಂದು ಉದ್ಘಾಟಿಸಿದರು.
ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ - ಆಸಿಯಾನ್ ವಲಯದ  ಪ್ರಮುಖ ರಾಷ್ಟ್ರಗಳಾದ ವಿಯೆಟ್ನಾಂ ಮತ್ತು ಕಾಂಬೋಡಿಯಾಗಳೊಂದಿಗೆ ಭಾರತದ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶದಿಂಡ ಎರಡು ರಾಷ್ಟ್ರಗಳ ಪ್ರವಾಸ ಕೈಗೊಂಡಿರುವ ಸಚಿವೆ ಸೋಮವಾರ ವಿಯೆಟ್ನಾಂ ನಲ್ಲಿದ್ದಾರೆ.
ಇಂಡಿಯನ್ ಮಿಷನ್ನ ಚಾನ್ಸೆರಿ ಕಟ್ಟಡದಲ್ಲಿ ಈ ಪ್ರತಿಮೆಯನ್ನು ಸ್ವರಾಜ್ ಅನಾವರಣಗೊಳಿಸಿದರು.
ಈ ಕಾರ್ಯಕ್ರಮದ ಕುರಿತು ಟ್ವೀಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ "ರಾಷ್ಟ್ರಪಿತನಿಗೆ ಗೌರವ! ಇಎಎಂ - ಸುಷ್ಮಾ ಸ್ವರಾಜ್ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿದರು" ಎಂದು ಬರೆದಿದ್ದಾರೆ.
ವಿಯೆಟ್ನಾಂ  ಅಧ್ಯಕ್ಷ ಟ್ರಾನ್ ದೈ ಕ್ವಾಂಗ್ ಅವರು ಮಾರ್ಚ್ ನಲ್ಲಿ ಭಾರತಕ್ಕೆ ಭೇಟಿ ನೀಡಿದಾಗ, ದೆಹಲಿಯ ರಾಜ್ ಘಾಟ್ ಗೆ ತೆರಳಿ ಮಹಾತ್ಮಾ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com