2008ರ ಮುಂಬೈ ದಾಳಿಗೆ ಪಾಕ್ ಉಗ್ರ ಸಂಘಟನೆ ಎಲ್ಇಟಿ ಕಾರಣ: ಪ್ರಧಾನಿ ಮೋದಿಗೆ ಮಣಿದ್ರಾ ಇಮ್ರಾನ್ ಖಾನ್?

ಇದೇ ಮೊದಲ ಬಾರಿಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ 2008ರ ಮುಂಬೈ ದಾಳಿಗೆ ಪಾಕ್ ಮೂಲದ ಉಗ್ರ ಸಂಘಟನೆ ಎಲ್ಇಟಿ ಕಾರಣ ಎಂದು ಹೇಳಿದ್ದು ಅಚ್ಚರಿಗೆ ಕಾರಣವಾಗಿದೆ...
ಇಮ್ರಾನ್ ಖಾನ್
ಇಮ್ರಾನ್ ಖಾನ್
ಇಸ್ಲಾಮಾಬಾದ್: ಇದೇ ಮೊದಲ ಬಾರಿಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ 2008ರ ಮುಂಬೈ ದಾಳಿಗೆ ಪಾಕ್ ಮೂಲದ ಉಗ್ರ ಸಂಘಟನೆ ಎಲ್ಇಟಿ ಕಾರಣ ಎಂದು ಒಪ್ಪಿಕೊಂಡಿದ್ದಾರೆ. 
2008ರ ಮುಂಬೈ ದಾಳಿ ಪ್ರಕರಣದ ಪ್ರಸ್ತುತ ಸ್ಥಿತಿಯನ್ನು ತಿಳಿಸುವಂತೆ ನಮ್ಮ ಸರ್ಕಾರವನ್ನು ಕೇಳಿದ್ದೇನೆ. ಇದೊಂದು ಭಯೋತ್ಪಾದಕ ದಾಳಿಯಾಗಿರುವುದರಿಂದ ವಿಶೇಷ ಕ್ರಮಗಳನ್ನು ಕೈಗೊಂಡು ಪ್ರಕರಣವನ್ನು ಇತ್ಯಾರ್ಥಗೊಳಿಸಲು ಹೇಳಿದ್ದೇನೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. 
ವಾಷಿಂಗ್ಟನ್ ಪೋಸ್ಟ್ ಗೆ ನೀಡಿದ ಸಂದರ್ಶನದಲ್ಲಿ ಇಮ್ರಾನ್ ಖಾನ್ 9 ವರ್ಷಗಳ ಹಳೆಯ ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ತಮ್ಮ ಸರ್ಕಾರದ ಅಧಿಕಾರಿಗಳಿಗೆ ಹೇಳಿರುವುದಾಗಿ ಹೇಳಿದ್ದಾರೆ. 
2008ರ ಮುಂಬೈ ದಾಳಿಯನ್ನು ಲಷ್ಕರ್ ಇ ತೊಯ್ಬಾ(ಎಲ್ಇಟಿ) ನಡೆಸಿತ್ತು. ದಾಳಿಗೆ ಕುರಿತಂತೆ ಹಲವು ಮಹತ್ವದ ದಾಖಲೆಗಳನ್ನು ಭಾರತ ಪಾಕಿಸ್ತಾನ ಸರ್ಕಾರಕ್ಕೆ ಕೊಟ್ಟಿದ್ದರು. ಈ ಹಿಂದಿನ ಸರ್ಕಾರ ಇವುಗಳನ್ನು ಅಲ್ಲಗೆಳೆಯುತ್ತಾ ಬಂದಿದ್ದವು. ಆದರೆ ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆಯನ್ನು ತೀವ್ರವಾಗಿ ಖಂಡಿಸುತ್ತಿದ್ದು ಅಲ್ಲದೆ ಪಾಕಿಸ್ತಾನದ ಭಯೋತ್ಪಾದಕ ದಾಳಿಗಳಿಗೆ ಆರ್ಥಿಕ ನೀಡುತ್ತಿದೆ ಎಂದು ಪ್ರತಿಪಾದಿಸುತ್ತಾ ಬಂದಿದ್ದು ಇದೀಗ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com