ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುಎಇಯ ವಕೀಲರೊಬ್ಬರು, ಯುಎಇಯಲ್ಲಿ ಇಂತಹ ಘಟನೆಗಳು ಸಾಮಾನ್ಯ. ವಾಟ್ಸಪ್ ನಲ್ಲಿ ತಮಗೆ ಬಂದಿದ್ದ ವಿಡಿಯೋವನ್ನು ಫಾರ್ವರ್ಡ್ ಮಾಡಿದ ಒಂದೇ ಕಾರಣಕ್ಕೇ ಸೌದಿ ಸರ್ಕಾರ ವ್ಯಕ್ತಿಯೋರ್ವನಿಗೆ ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು ಎಂದು ಹೇಳಿದ್ದಾರೆ. ಅರಬ್ ರಾಷ್ಟ್ರಗಳಲ್ಲಿ ಹೆಣ್ಣಿಗೆ ಅವಮಾನ ಮಾಡಿದರೆ ಅಥವಾ ಮಹಿಳೆಯರಿಗೆ ಬೈದರೆ ಅಲ್ಲಿನ ಸರ್ಕಾರ ಶಿಕ್ಷೆ ವಿಧಿಸುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.