ಇಂಡೋನೇಷ್ಯಾ: ಜ್ವಾಲಾಮುಖಿಯಿಂದ ಪ್ರಚೋದಿಸಲ್ಪಟ್ಟ ಸುನಾಮಿಯಿಂದ 43 ಸಾವು

ಇಂಡೋನೇಷ್ಯಾದ ಸುಂದಾ ಸ್ಟ್ರೈಟ್ ಕರಾವಳಿ ಪ್ರದೇಶದಲ್ಲಿ ಜ್ವಾಲಾಮುಖಿಯಿಂದ ಉಂಟಾದ ಸುನಾಮಿಯಿಂದ ಸುಮಾರು 43 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಸುನಾಮಿ ಅಪ್ಪಳಿಸಿರುವ ಚಿತ್ರ
ಸುನಾಮಿ ಅಪ್ಪಳಿಸಿರುವ ಚಿತ್ರ

ಜಕಾರ್ತ: ಇಂಡೋನೇಷ್ಯಾದ ಸುಂದಾ ಸ್ಟ್ರೈಟ್ ಕರಾವಳಿ ಪ್ರದೇಶದಲ್ಲಿ ಜ್ವಾಲಾಮುಖಿಯಿಂದ ಉಂಟಾದ ಸುನಾಮಿಯಿಂದ ಸುಮಾರು 43 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

ಸುನಾಮಿಯಿಂದಾಗಿ  20 ಮೀಟರ್ ಎತ್ತರದ ಭಾರೀ ಗಾತ್ರದ ಅಲೆಗಳು ಸಮುದ್ರ ತೀರ ಪ್ರದೇಶಗಳಿಗೆ ಅಪ್ಪಳಿಸಿದ್ದು, ಹೋಟೆಲ್ ಗಳು ಸೇರಿದಂತೆ ನೂರಾರು ಮನೆಗಳು ಹಾನಿಯಾಗಿವೆ ಎಂದು ಸರ್ಕಾರ ತಿಳಿಸಿದೆ.  600ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.

ಅನಾಕ್ ಕ್ರಾಕಟುವಿನ ಜ್ವಾಲಾಮುಖಿಯ ಉಲ್ಬಣದಿಂದ ಸಾಗರದಡಿಯಲ್ಲಿ ಭೂ ಕಂಪನ ಉಂಟಾಗಿ  ಸುನಾಮಿ ಸಂಭವಿಸಿದೆ ಎಂದು ಇಂಡೊನೇಷ್ಯಾದ  ಭೂಗರ್ಭ ಶಾಸ್ತ್ರಜ್ಞರು ಹಾಗೂ ವಿಜ್ಞಾನಿಗಳು ತಿಳಿಸಿದ್ದಾರೆ.

ಸಮುದ್ರದದಿಂದ 15ರಿಂದ 20 ಮೀಟರ್ ಎತ್ತರದಲ್ಲಿ ಅಲೆಗಳು ಬರುತ್ತಿದ್ದನ್ನು ಕಂಡು ಗಾಬರಿಗೊಂಡು ಓಡಿದ್ದಾಗಿ ಪ್ರತ್ಯೇಕ್ಷದರ್ಶಿಗಳು ತಿಳಿಸಿದ್ದಾರೆ. ತಾವು ತಂಗಿದ್ದ ಹೋಟೆಲ್ ಗೆ ಅಪ್ಪಳಿಸಿದ ಮತ್ತೊಂದು ಅಲೆಯಿಂದ ಕಾರು ಕೊಚ್ಚಿಕೊಂಡು ಹೋಯಿತು. ಅಲ್ಲಿಂದ ಹೇಗೂ ತಮ್ಮ ಕುಟುಂಬ ಪಾರಾಗಿ ಬಂದಿದ್ದಾಗಿ  ಅಂಡರ್ಸನ್ ಎಂಬವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಜವಾದಲ್ಲಿನ ಬಾಂಟೆನ್ ಪ್ರದೇಶದಲ್ಲಿನ ಪಾಂಡೆಗ್ ಲಾಂಗ್  ಪ್ರದೇಶ ಸುನಾಮಿಯಿಂದ ತೀವ್ರ ಹಾನಿಗೊಳಗಾಗಿದ್ದು,  33 ಮಂದಿ ಸಾವನ್ನಪ್ಪಿದ್ದಾರೆ ಎಂದು  ವಿಪತ್ತು ನಿರ್ವಹಣಾ ಏಜೆನ್ಸಿ ಮಾಹಿತಿ ನೀಡಿದೆ.
ದಕ್ಷಿಣ ಸುಮಾತ್ರದಲ್ಲಿನ  ಬಾಂದರ್ ಲಾಮ್  ಪುಂಗ್ ನಗರದಿಂದ ನೂರಾರು ನಿರಾಶ್ರಿತರನ್ನು  ಗೌರ್ವನರ್ ಕಚೇರಿಗೆ ಸ್ಥಳಾಂತರಿಸಲಾಗಿದೆ ಎಂಬುದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com