ಉಲ್ಪಣಗೊಂಡ ಮಾಲ್ಡೀವ್ಸ್ ರಾಜಕೀಯ ಅಸ್ಥಿರತೆ: ಮಾಜಿ ಅಧ್ಯಕ್ಷ, ಮುಖ್ಯ ನ್ಯಾಯಮೂರ್ತಿ ಬಂಧನ

ಮಾಲ್ಡೀವ್ಸ್'ನಲ್ಲಿನ ರಾಜಕೀಯ ಅಸ್ಥಿರತೆ ಕಾಲ ಕಳೆಯುತ್ತಿದ್ದಂತೆಯೇ ಮತ್ತಷ್ಟು ಉಲ್ಭಣಗೊಳ್ಳುತ್ತಿದ್ದು, ಮಾಲ್ಡೀವ್ಸ್'ನ ಮಾಜಿ ಅಧ್ಯಕ್ಷ ಮೊಮೂನ್ ಅಬ್ದುಲ್ ಗಯೂಮ್, ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಇತರೆ...
ಉಲ್ಭಣಗೊಂಡ ಮಾಲ್ಡೀವ್ಸ್ ರಾಜಕೀಯ ಅಸ್ಥಿರತೆ: ಮಾಜಿ ಅಧ್ಯಕ್ಷ, ಮುಖ್ಯ ನ್ಯಾಯಮೂರ್ತಿ ಬಂಧನ
ಉಲ್ಭಣಗೊಂಡ ಮಾಲ್ಡೀವ್ಸ್ ರಾಜಕೀಯ ಅಸ್ಥಿರತೆ: ಮಾಜಿ ಅಧ್ಯಕ್ಷ, ಮುಖ್ಯ ನ್ಯಾಯಮೂರ್ತಿ ಬಂಧನ
ಮೇಲ್ (ಮಾಲ್ಡೀವ್ಸ್): ಮಾಲ್ಡೀವ್ಸ್'ನಲ್ಲಿನ ರಾಜಕೀಯ ಅಸ್ಥಿರತೆ ಕಾಲ ಕಳೆಯುತ್ತಿದ್ದಂತೆಯೇ ಮತ್ತಷ್ಟು ಉಲ್ಭಣಗೊಳ್ಳುತ್ತಿದ್ದು, ಮಾಲ್ಡೀವ್ಸ್'ನ ಮಾಜಿ ಅಧ್ಯಕ್ಷ ಮೊಮೂನ್ ಅಬ್ದುಲ್ ಗಯೂಮ್, ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಇತರೆ ಪ್ರಮುಖ ಅಧಿಕಾರಿಗಳನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಮಂಗಳವಾರ ತಿಳಿದುಬಂದಿದೆ. 
ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಅವರು ತುರ್ತು ಪರಿಸ್ಥಿತಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಅಬ್ದುಲ್ ಗಯೂಮ್, ಮುಖ್ಯ ನ್ಯಾಯಮೂರ್ತಿ ಅಬ್ದುಲ್ಲಾ ಸಯೀದ್, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಲಿ ಹಮೀದ್ ಮತ್ತು ನ್ಯಾಯಾಂಗ ನಿರ್ವಾಹಕರು ಹಸ್ಸಾನ್ ಸಯೀದ್ ಅವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 
ಮೌಮೂನ್ ಜೊತೆಗೆ ಅವರ ಅಳಿಯನನ್ನು ಪೊಲೀಸರು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ಹೇಳಲಾಗುತ್ತಿದೆ. 
ಈ ಕುರಿತಂತೆ ಮಾಲ್ಡೀವ್ಸ್ ಸಂಸತ್ತಿನ ಮಾಜಿ ಸ್ಪೀಕರ್ ಅಬ್ದುಲ್ಲಾ ಶಾಹೀದ್ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಮೌಮೂಮ್ ಅಬ್ದುಲ್ಲಾ ಗಯೂಮ್ ಮತ್ತು ಅವರ ಅಳಿಯನನ್ನು ಮಾಲ್ಡೀವ್ಸ್'ನ ವಿಶೇಷ ಕಾರ್ಯಾಚರಣೆ ಪಡೆಗಳು ಬಂಧನಕ್ಕೊಳಪಡಿಸಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com