ಭಾರತೀಯ ರಾಜ್ ಶಾ ರಿಂದ ಶ್ವೇತಭವನದಲ್ಲಿ ಚೊಚ್ಚಲ ಪತ್ರಿಕಾಗೋಷ್ಟಿ

ಭಾರತೀಯ ಮೂಲದ ಅಮೆರಿಕನ್ ಪ್ರಜೆ ರಾಜ್‌ ಶಾ ಶ್ವೇತಭವನದಲ್ಲಿ ಚೊಚ್ಚಲ ದೈನಂದಿನ ಪತ್ರಿಕಾ ಗೋಷ್ಠಿ ನಡೆಸಿದ್ದಾರೆ.
ರಾಜ್ ಶಾ
ರಾಜ್ ಶಾ
ವಾಷಿಂಗ್ ಟನ್: ಭಾರತೀಯ ಮೂಲದ ಅಮೆರಿಕನ್ ಪ್ರಜೆ  ರಾಜ್‌ ಶಾ ಶ್ವೇತಭವನದಲ್ಲಿ  ಚೊಚ್ಚಲ ದೈನಂದಿನ ಪತ್ರಿಕಾ ಗೋಷ್ಠಿ ನಡೆಸಿದ್ದಾರೆ. ಈ ಮುಖೇನ ಇಂತಹಾ ಗೋಷ್ಠಿ  ನಡೆಸಿದ್ದ ಮೊದಲ ಭಾರತೀಯನೆಂದು ಹೆಸರಾಗಿದ್ದಾರೆ.
ಶ್ವೇತ ಭವನದ ಪ್ರಧಾನ ಉಪ ಮಾಧ್ಯಮ ಕಾರ್ಯದರ್ಶಿ ಸ್ಥಾನದಲ್ಲಿ ಕಾರ್ಯ ನಿರ್ವಹಿಸುವ ರಾಜ್ ಶಾ ಶ್ವೇತಭವನದ ಮಾದ್ಯಮ ವಿಭಾಗದ ಅತ್ಯುನ್ನತ ಹುದ್ದೆಗೇರಿದ ಮೊದಲ ಭಾರತೀಯರೂ ಹೌದು.
ರಾಜ್ ಶಾ ತಮ್ಮ ಪ್ರಥಮ ಪತ್ರಿಕಾ ಗೋಷ್ಟಿ ನಡೆಸುವದಕ್ಕೆ ಮುನ್ನ ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಸಾರಾ ಸ್ಯಾಂಡರ್‌ಸ್‌, ಟ್ರಂಪ್ ಆಡಳಿತದಲ್ಲಿ ಅತ್ಯುತ್ತಮ ಹಾಗೂ ಉಜ್ವಲ ವ್ಯಕ್ತಿ ಶಾ ಆಗಿರುವುದಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ರಾಜ್ ಶಾ (33) ಕಳೆದ ಸಪ್ಟೆಂಬರ್ ನಲ್ಲಿ ಶ್ವೇತ ಭವನ ಪ್ರಧಾನ ಉಪ ಮಾಧ್ಯಮ ಕಾರ್ಯದರ್ಶಿ ಆಗಿ ನೇಮಕಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com