ನೇಪಾಳದ 41ನೇ ಪ್ರಧಾನ ಮಂತ್ರಿಯಾಗಿ ಹಿರಿಯ ಕಮ್ಯುನಿಸ್ಟ್ ವಾದಿ ಕೆಪಿ ಶರ್ಮಾ ಒಲಿ ಆಯ್ಕೆ

ನೇಪಾಳದಲ್ಲಿ ನಡೆದ ರಾಜಕೀಯ ಪ್ರಹಸನದಲ್ಲಿ ಆ ದೇಶದ ನೂತನ ಪ್ರಧಾನಿಯಾಗಿ ಹಿರಿಯ ಕಮ್ಯುನಿಸ್ಟ್ ಮುಖಂಡ ಕೆಪಿ ಶರ್ಮಾ ಒಲಿ ಆಯ್ಕೆಯಾಗಿದ್ದಾರೆ.
ನೇಪಾಳ ನೂತನ ಪ್ರಧಾನಿ ಕೆಪಿ ಶರ್ಮಾ ಒಲಿ
ನೇಪಾಳ ನೂತನ ಪ್ರಧಾನಿ ಕೆಪಿ ಶರ್ಮಾ ಒಲಿ
ಕಠ್ಮಂಡು: ನೇಪಾಳದಲ್ಲಿ ನಡೆದ ರಾಜಕೀಯ ಪ್ರಹಸನದಲ್ಲಿ ಆ ದೇಶದ ನೂತನ ಪ್ರಧಾನಿಯಾಗಿ ಹಿರಿಯ ಕಮ್ಯುನಿಸ್ಟ್ ಮುಖಂಡ ಕೆಪಿ ಶರ್ಮಾ ಒಲಿ ಆಯ್ಕೆಯಾಗಿದ್ದಾರೆ.
ದೇಶದ ಎರಡು ಪ್ರಮುಖ ಕಮ್ಯುನಿಸ್ಟ್ ಪಕ್ಷಗಳಾದ ಸಿಪಿಎನ್ ಮತ್ತು ಯುಎಂಎಲ್ ಪಕ್ಷಗಳ ನಡುವಿನ ಚುನಾವಣಾ ಪೂರ್ವ ಮೈತ್ರಿಯಿಂದಾಗಿ ಸಿಪಿಎನ್ ಪಕ್ಷದ ಹಿರಿಯ ಮುಖಂಡ ಖಡ್ಗಕುಮಾರ್ ಶರ್ಮಾ ಒಲಿ ಅವರಿಗೆ ಮತ್ತೆ  ನೇಪಾಳ ಪ್ರಧಾನಿ ಹುದ್ದೆ ಅರಸಿಬಂದಿದ್ದು, ನೇಪಾಳದ 41ನೇ ಪ್ರಧಾನಿಯಾಗಿ ಕೆಪಿ ಶರ್ಮಾ ಒಲಿ ಆಯ್ಕೆಯಾಗಿದ್ದಾರೆ. 
ಈ ಹಿಂದೆ ಡಿಸೆಂಬರ್ ನಲ್ಲಿ ನಡೆದ ನೇಪಾಳದ ಸಂಸತ್ ಮತ್ತು ಪ್ರಾಂತೀಯ ಚುನಾವಣೆಯಲ್ಲಿ ಸಿಪಿಎನ್ ಮತ್ತು ಯುಎಂಎಲ್ ಮೈತ್ರಿಕೂಟ ಪ್ರಚಂಡ ಬಹುಮತಗಳಿಸಿದ್ದು, ಒಟ್ಟು 275 ಕ್ಷೇತ್ರಗಳ ಪೈಕಿ 174 ಕ್ಷೇತ್ರಗಳಲ್ಲಿ ಜಯಭೇರಿ  ಭಾರಿಸಿದೆ. ಇನ್ನು ನೂತನ ಕಮ್ಯುನಿಸ್ಟ್ ಮೈತ್ರಿಕೂಟಕ್ಕೆ ಕೆಪಿ ಶರ್ಮಾ ಒಲಿ ಮತ್ತು ಸಿಪಿಎನ್ ಮಾವೋ ಕೇಂದ್ರ ಪಕ್ಷದ ಮುಖ್ಯಸ್ಥ ಪ್ರಚಂಡ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ಜಾರೆ ಎನ್ನಲಾಗಿದೆ.
ಇನ್ನು ನೇಪಾಳದ ನೂತನ ಪ್ರಧಾನಿ ಕೆಪಿಶರ್ಮಾ ಒಲಿ ಚೀನಾ ಪರ ಒಲವು ಹೊಂದಿದ್ದು, ಈ ಹಿಂದೆ 2015ರಿಂದ 2016ರ ಆಗಸ್ಟ್ 3ರವರೆಗೂ ನೇಪಾಳದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com