ಭಾರತೀಯ ಇಂಜಿನಿಯರ್ ವಿಕಾಸ್ ಸತಾಯಿಗೆ ವೈಜ್ಞಾನಿಕ ಮತ್ತು ತಾಂತ್ರಿಕ ಆಸ್ಕರ್ ಪ್ರಶಸ್ತಿ

ಪುಣೆ ಮೂಲದ ವಿಕಾಸ್ ಸತಾಯಿ ಅವರು ವೈಜ್ಞಾನಿಕ ಮತ್ತು ತಾಂತ್ರಿಕ ಆಸ್ಕರ್ ಪ್ರಶಸ್ತಿ 2018 ವಿಜೇತರಾಗಿದ್ದಾರೆ.
ವಿಕಾಸ್ ಸತಾಯೆ
ವಿಕಾಸ್ ಸತಾಯೆ
Updated on
ಲಾಸ್ ಏಂಜಲೀಸ್: ಪುಣೆ ಮೂಲದ ವಿಕಾಸ್ ಸತಾಯಿ ಅವರು  ವೈಜ್ಞಾನಿಕ ಮತ್ತು ತಾಂತ್ರಿಕ ಆಸ್ಕರ್ ಪ್ರಶಸ್ತಿ 2018 ವಿಜೇತರಾಗಿದ್ದಾರೆ. 
ವೈಜ್ಞಾನಿಕ ಮತ್ತು ಇಂಜಿನಿಯರಿಂಗ್ ಅಕಾಡೆಮಿ ವಿಭಾಗದ ಈ ಪುರಸ್ಕಾರವನ್ನು ಅಮೆರಿಕಾದ ಕ್ಯಾಲಿಫೋರ್ನಿಯಾ, ಲಾಸ್ ಏಂಜಲೀಸ್  ನ ಬೇವರಿ ಹಿಲ್ಸ್ ನಲ್ಲಿ ಕಳೆದ ಶನಿವಾರ ಪ್ರಧಾನ ಮಾಡಲಾಗಿದೆ. ಪರಿಕಲ್ಪನಾಶೀಲತೆ, ವಿನ್ಯಾಸ, ಇಂಜಿನಿಯರಿಂಗ್, ಮತ್ತು ನ್ಯೂಜಿಲೆಂಡ್ ನಲ್ಲಿ ಕ್ವೀನ್ಸ್ ಟೌನ್ ನಲ್ಲಿ ನಡಿಸಿದ್ದ ಶಾಟ್ಓವರ್ ಕ್ಯಾಮೆರಾ ಸಿಸ್ಟಮ್ ನಲ್ಲಿನ 'ಶಾಟ್ಓವರ್ ಕೆ 1 ಕ್ಯಾಮೆರಾ ಸಿಸ್ಟಮ್' ಅಳವಡಿಕೆಗೆ ಈ ಪ್ರಶಸ್ತಿ ಬಂದಿದೆ.
ಶಾಟ್ಓವರ್ ಕೆ 1 ಕ್ಯಾಮೆರಾವು ವೈಮಾನಿಕ ಚಿತ್ರೀಕರಣದಲ್ಲಿ ಬಳಸಲಾಗುವ ಕ್ಯಾಮರಾ ಮೌಂಟ್ ಆಗಿದ್ದು ಇದು  ಕ್ಯಾಮರಾ ಮತ್ತು ಮಸೂರವನ್ನು ಸಾಗಿಸುವ ಒಂದು ಹೆಲಿಕಾಪ್ಟರ್ ನ ತಳಕ್ಕೆ ಅಳವಡಿಕೆಯಾಗಿರುತ್ತದೆ.ಕ್ಯಾಮರಾ ಮೌಂಟ್ ಕ್ಯಾಮರಾ ತಲುಪುವ ಯಾವುದೇ ಸ್ಥಳದಲ್ಲಿ ಉಂತಾಗಬಹುದಾದ  ಕಂಪನವನ್ನು ತೊಡೆದುಹಾಕುವುದು, ಈ ಮೂಲಕ ಉತ್ತಮ ಹಾಗೂ ಸ್ಥಿರವಾದ ಚಿತ್ರ ಖಾತರಿಪಡಿಸುತ್ತದೆ.
ನಾಲ್ವರು ಸದಸ್ಯರ ತಂಡವು ಕ್ಯಾಮರಾ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಿದ್ದು ಸತಾಯೆ, ಜಾನ್ ಕೋಯ್ಲೆ, ಬ್ರಾಡ್ ಹರ್ನ್ಡೆಲ್ ಮತ್ತು ಶೇನ್ ಬಕ್ಹ್ಯಾಮ್ ಈ ತಂಡದ ಸದಸ್ಯರಾಗಿದ್ದಾರೆ. 
ಉದ್ಯಮದ ಅಭಿವೃದ್ಧಿಯ ಮೇಲೆ ನಿರ್ದಿಷ್ಟ ಪರಿಣಾಮವನ್ನು ಉಂಟುಮಾಡಬಹುದಾದ ವೈಜ್ಞಾನಿಕ ಸಾಧನೆಗಳಿಗಾಗಿ ಸೈಂಟಿಫಿಕ್ ಮತ್ತು ಇಂಜಿನಿಯರಿಂಗ್ ಪ್ರಶಸ್ತಿಯನ್ನು ನೀಡಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com