ಆಫ್ಘಾನಿಸ್ಥಾನದಲ್ಲಿ ಅಮೆರಿಕ ಯೋಧರನ್ನು ಹತ್ಯೆ ಮಾಡಿದ್ದ ಅಲ್‍ಖೈದಾ ಉಗ್ರನಿಗೆ ಜೀವಾವಧಿ ಶಿಕ್ಷೆ

ಒಸಾಮಾ ಬಿನ್ ಲಾಡೆನ್ ನ ಅಲ್‍ಖೈದಾ ಉಗ್ರಗಾಮಿ ಸಂಘಟನೆಯ ಭಯೋತ್ಪಾದಕನೊಬ್ಬನಿಗೆ ಅಮೆರಿಕಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಅಲ್‍ಖೈದಾ ಉಗ್ರಗಾಮಿ ಇಬ್ರಾಹಿಂ ಸುಲೇಮಾನ್ ಆದ್ನಾನ್ ಆಡಂ ಹರೂನ್‍
ಅಲ್‍ಖೈದಾ ಉಗ್ರಗಾಮಿ ಇಬ್ರಾಹಿಂ ಸುಲೇಮಾನ್ ಆದ್ನಾನ್ ಆಡಂ ಹರೂನ್‍
ನ್ಯೂಯಾರ್ಕ್: ಒಸಾಮಾ ಬಿನ್ ಲಾಡೆನ್ ನ ಅಲ್‍ಖೈದಾ ಉಗ್ರಗಾಮಿ ಸಂಘಟನೆಯ ಭಯೋತ್ಪಾದಕನೊಬ್ಬನಿಗೆ ಅಮೆರಿಕಾ ನ್ಯಾಯಾಲಯವು  ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಅಲ್‍ಖೈದಾ ಉಗ್ರಗಾಮಿ ಇಬ್ರಾಹಿಂ ಸುಲೇಮಾನ್ ಆದ್ನಾನ್ ಆಡಂ ಹರೂನ್‍ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದು ಆಫ್ಘಾನಿಸ್ಥಾನದಲ್ಲಿ ಅಮೆರಿಕ ಸೇನಾ ಯೋಧರ ಹತ್ಯೆ ಮತ್ತು ನೈಜೀರಿಯಾದ ಯುಎಸ್‍ಎ ರಾಯಭಾರಿ ಕಚೇರಿ ಮೇಲೆ ಬಾಂಬ್ ದಾಳಿ ಪ್ರಕರಣದಲ್ಲಿ ಈತನ ಕೈವಾಡವಿತ್ತು.
ಅಮೆರಿಕಾದಲ್ಲಿ ಒಸಾಮಾ ಬಿನ್ ಲಾಡೆನ್ ನಡೆಸಿದ್ದ ಉಗ್ರ ದಾಳಿಗೆ ಒಂದು ವಾರದ ಮುನ್ನ ಈತ ಅಲ್‍ಖೈದಾಗೆ ಸೇರ್ಪಡೆಯಾಗಿದ್ದ. ಆ ಬಳಿಕ ನಾನಾ ಭಯೋತ್ಪಾದಕ ದಾಳಿಗಳಲ್ಲಿ ಈತ ಪಾಲ್ಗೊಂಡಿದ್ದ ಎಂದು ಅಮೆರಿಕಾ ಪೋಲೀಸ್ ತನಿಖಾ ದಳದ ಕಮಿಷನರ್ ಜೇಮ್ಸ್ ಪಿ.ಒ.ನೀಲ್ ಹೇಳಿದ್ದಾರೆ.
ಅಬ್ದುಲ್ ಹಾದಿಹಲ್ ಇರಾಕಿ ಜತೆ ಸೇರಿದ್ದ ಈತ ಪಾಕಿಸ್ತಾನದ ಗುಡ್ಡಗಾಡು ಪ್ರದೇಶದ ಬುಡಕಟ್ಟು ಜನಾಂಗದ ಯುವಕರಿಗೆ ಉಗ್ರ ತರಬೇತಿ ನೀಡುತ್ತಿದ್ದ ಎನ್ನಲಾಗುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com