ಬೀಜಿಂಗ್: ಭಾರತದ ಬೆದರಿಕೆಯನ್ನು ಎದುರಿಸುವುದಕ್ಕಾಗಿ ಚೀನಾ ಗಡಿ ನಿಯಂತ್ರಣ ರೇಖೆ(ಎಲ್ ಒಸಿ) ಬಳಿ ತನ್ನ ಪಶ್ಚಿಮ ಥಿಯೇಟರ್ ಕಮಾಂಡ್ ನ ವಾಯುಪಡೆಯನ್ನು ಮೇಲ್ದರ್ಜೆಗೆ ಏರಿಸುತ್ತಿದೆ ಎಂದು ಸೇನಾ ತಜ್ಞರು ಹೇಳಿರುವುದಾಗಿ ಅಧಿಕೃತ ಮಾಧ್ಯಮ ವರದಿ ಮಾಡಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಚೀನಾ ಹೊಸ ವರ್ಷಾಚರಣೆ ವೇಳೆ ಜೆ-10 ಫೈಟರ್ ಜೆಟ್ ಮತ್ತು ಜೆ-11 ಫೈಟರ್ ಜೆಟ್ ಗಳ ಹಾರಾಟದ ಚಿತ್ರಗಳನ್ನು ಚೀನಾ ಸೇನೆ ಬಿಡುಗಡೆ ಮಾಡಿದೆ.
ಈ ಫೈಟರ್ ಜೆಟ್ ಗಳು ಪಿಎಲ್ಎ ನ ಪಶ್ಚಿಮ ಥಿಯೇಟರ್ ಕಮಾಂಡ್ ಸೇರಿದವು ಎಂದು ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ) ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ.
ಪಶ್ಚಿಮ ಥಿಯೇಟರ್ ಕಮಾಂಡ್ ಭಾರತಕ್ಕೆ ಹೊಂದಿಕೊಂಡಿರುವ ಗಡಿ ನಿಯಂತ್ರಣ ರೇಖೆಯ ಭದ್ರತೆಯನ್ನು ನೋಡಿಕೊಳ್ಳುತ್ತದೆ.