ಮೆಕ್ಕಾದ ಪವಿತ್ರ ಮಸೀದಿಯಲ್ಲಿ ಮಹಿಳೆಯರಿಂದ ಬೋರ್ಡ್ ಗೇಮ್ ಆಟ, ಫೋಟೋ ವೈರಲ್

ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳ ಮೆಕ್ಕಾ-ಮದೀನದಲ್ಲಿ ಮಹಿಳೆಯರ ತಂಡವೊಂದು ಬೋರ್ಡ್ ಗೇಮ್ ಆಟವಾಡುತ್ತಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಮಹಿಳೆಯರಿಂದ ಬೋರ್ಡ್ ಗೇಮ್ ಆಟ
ಮಹಿಳೆಯರಿಂದ ಬೋರ್ಡ್ ಗೇಮ್ ಆಟ
ಮೆಕ್ಕಾ: ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳ ಮೆಕ್ಕಾ-ಮದೀನದಲ್ಲಿ ಮಹಿಳೆಯರ ತಂಡವೊಂದು ಬೋರ್ಡ್ ಗೇಮ್ ಆಟವಾಡುತ್ತಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಸ್ಟೆಪ್ ಫೀಡ್ ಎಂಬ ಇಂಗ್ಲೀಷ್ ವೆಬ್ ಸೈಟಿನಲ್ಲಿ ಪ್ರಕಟವಾಗಿದ್ದ ಈ ಫೋಟೋಗೆ ಇದೀಗ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಪವಿತ್ರ ಮಸೀದಿಯಲ್ಲಿ ಮಹಿಳೆಯರು ಬೋರ್ಡ್ ಗೇಮ್ ಆಟವಾಡುತ್ತಿರುವುದು ಆಕ್ರೋಶಕ್ಕೆ  ಕಾರಣವಾಗಿದೆ. ಅಲ್ಲದೆ ಮಹಿಳೆಯರು ಕುಳಿತಿದ್ದ ಭಂಗಿಗೂ ಮೂಲಭೂತ ವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲೇ ವ್ಯಾಪಕ ವಿರೋಧಾತ್ಮಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಇನ್ನು ಈ ನಾಲ್ಕು ಮಹಿಳೆಯರು ಮಸೀದಿ ಆವರಣದಲ್ಲಿ ಕುಳಿತು ಬೋರ್ಡ್ ಗೇಮ್ ಆಡುತ್ತಿರುವುದರ ಕುರಿತು ಮೆಕ್ಕಾ-ಮದೀನಾ ಮಸೀದಿ ಆಡಳಿತ ಮಂಡಳಿ ಸ್ಪಷ್ಟನೆ ಕೂಡ ನೀಡಿದ್ದು, ಹೌದು ನಾಲ್ಕು ಮಹಿಳೆಯರ ತಂಡ ಸೀಕ್ವೆನ್ಸ್  ಎಂಬ ಬೋರ್ಡ್ ಗೇಮ್ ಆಡುತ್ತಿತ್ತು. ಇದನ್ನರಿತ ಸಿಬ್ಬಂದಿ ಕೂಡಲೇ ಪವಿತ್ರ ಸ್ಥಳದಲ್ಲಿ ಈ ಆಟವನ್ನು ಆಡಬಾರದು ಎಂದು ತಿಳಿಹೇಳಿ ಕಳುಹಿಸಿದ್ದಾರೆ. ಮಹಿಳೆಯರೂ ಕೂಡ ಅದಕ್ಕೆ ಸಕಾರಾತ್ಮಕವಾಗಿಯೇ ಸ್ಪಂದಿಸಿ ಅಲ್ಲಿಂದ  ಹೊರಟು ಹೋಗಿದ್ದಾರೆ ಎಂದು ಸ್ಪಷ್ಟನೆ ನೀಡಿದೆ.
ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳಿಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಹಿಂದೆ 2015ರಲ್ಲೂ ಇಂತಹುದೇ ಘಟನೆ ಮೆಕ್ಕಾ-ಮದೀನ ಮಸೀದಿಯಲ್ಲಿ ನಡೆದಿತ್ತು. ಯುವಕರ ಗುಂಪು ಇದೇ ರೀತಿ ಬೋರ್ಡ್  ಗೇಮ್ ಆಡುತ್ತಿದ್ದರು. ಈ ವೇಳೆ ಸಿಬ್ಬಂದಿಗಳನ್ನು ಅವರನ್ನು ಮಸೀದಿಯಿಂದ ಹೊರಗೆ ಕಳುಹಿಸಿದ್ದರು. ಈ ವೇಳೆಯೂ ಇದೇ ರೀತಿ ವಿವಾದ ಭುಗಿಲೆದ್ದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com