ಭಾರತೀಯ ಅಧಿಕಾರಿಗಳಿಂದ ನನ್ನ ತಾಯಿಗೆ ಬೆದರಿಕೆ: ಪಾಕ್ ವಿಡಿಯೋದಲ್ಲಿ ಕುಲಭೂಷಣ್ ಬಹಿರಂಗ

ನಾನಿನ್ನೂ ಭಾರತೀಯ ನೌಕಾಪಡೆಯ ಕಾರ್ಯನಿರತ ಅಧಿಕಾರಿ ಎಂದು ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾದವ್...
ಪಾಕ್ ಸರ್ಕಾರ ಬಿಡುಗಡೆ ಮಾಡಿರುವ ಕುಲಭೂಷಣ್ ಜಾದವ್ ನೂತನ ವಿಡಿಯೋ
ಪಾಕ್ ಸರ್ಕಾರ ಬಿಡುಗಡೆ ಮಾಡಿರುವ ಕುಲಭೂಷಣ್ ಜಾದವ್ ನೂತನ ವಿಡಿಯೋ
ಇಸ್ಲಾಮಾಬಾದ್: ನಾನಿನ್ನೂ ಭಾರತೀಯ ನೌಕಾಪಡೆಯ ಕಾರ್ಯನಿರತ ಅಧಿಕಾರಿ ಎಂದು ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ಕುಲಭೂಷಣ್ ಜಾದವ್ ಹೇಳಿದ್ದಾರೆ.
ಗುರುವಾರ ಪಾಕಿಸ್ತಾನ ಸರ್ಕಾರ ಕುಲಭೂಷಣ್ ಜಾದವ್ ಅವರ ನೂತನ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ವಿಡಿಯೋದಲ್ಲಿ ಕುಲಭೂಷಣ್ ಜಾದವ್ ತಾವು ಪಾಕಿಸ್ತಾನ ಜೈಲಿನಲ್ಲಿ ಯಾವುದೇ ಸಮಸ್ಯೆ ಎದುರಿಸುತ್ತಿಲ್ಲ ಎಂದು  ಸ್ಪಷ್ಟಪಡಿಸಿದ್ದಾರೆ. 'ನಾನು ಭಾರತದ ಗುಪ್ತಚರ ಇಲಾಖೆಯ ಅಧಿಕಾರಿಯಲ್ಲ. ಆದರೆ ನಾನಿನ್ನೂ ಭಾರತೀಯ ನೌಕಾಪಡೆಯ ಕಾರ್ಯನಿರತ ಅಧಿಕಾರಿಯಾಗಿದ್ದೇನೆ. ನನ್ನ ವೃತ್ತಿ ಬಗ್ಗೆ ಕೆಲವರು ಸುಳ್ಳು ಮಾಹಿತಿಗಳನ್ನು  ಪ್ರಸರಿಸುತ್ತಿದ್ದಾರೆ. ಆದರೆ ಅವೆಲ್ಲಾ ಸುಳ್ಳು ಎಂದು ಕುಲಭೂಷಣ್ ಜಾದವ್ ವಿಡಿಯೋದಲ್ಲಿ ಹೇಳಿದ್ದಾರೆ.
ಇನ್ನು ಇತ್ತೀಚೆಗೆ ಅವರ ತಾಯಿ ಮತ್ತು ಪತ್ನಿ ಭೇಟಿ ಕುರಿತು ಮಾತನಾಡಿರುವ ಕುಲಭೂಷಣ್ ಜಾದವ್, ಭೇಟಿ ವೇಳೆ ಭಾರತೀಯ ಅಧಿಕಾರಿಯೊಬ್ಬರು ನನ್ನ ತಾಯಿ ಮತ್ತು ಪತ್ನಿ ವಿರುದ್ಧ ಚೀರಾಡುತ್ತಿದ್ದರು ಎಂದು ಕೇಳಿದ್ದೇನೆ. ಅವರು ನನ್ನ ತಾಯಿಯನ್ನು ಥಳಿಸಿ ಬಳಿಕ ವಿಮಾನದಲ್ಲಿ ಕರೆತಂದಿದ್ದರೇ ಎಂದು ಜಾದವ್ ಪ್ರಶ್ನಿಸಿದ್ದಾರೆ. 
ಕಳೆದ ಡಿಸೆಂಬರ್ ನಲ್ಲಿ ಕುಲಭೂಷಣ್ ಜಾದವ್ ಅವರ ತಾಯಿ ಆವಂತಿ ಜಾದವ್ ಮತ್ತು ಪತ್ನಿ ಚೇತನಾ ಜಾದವ್ ಪಾಕಿಸ್ತಾನದ ವಿದೇಶಾಂಗ ಕಚೇರಿಯಲ್ಲಿ ಕುಲಭೂಷಣ್ ಜಾದವ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ಜೆಪಿ ಸಿಂಗ್ ಅವರು ಸಾಥ್ ನೀಡಿದ್ದರು.
ಭಾರತದ ಪರ ಗೂಢಚಾರಿಕೆ ಮತ್ತು ಉಗ್ರದಾಳಿ ಆರೋಪ ಸಂಬಂಧ ಭಾರತದ ಕುಲಭೂಷಣ್ ಜಾದವ್ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದು, ಈ ಪ್ರಕರಣವನ್ನು ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com