ಅಮೆರಿಕಾಗೆ ಬೇಕಾಗಿರುವುದು ಹಕ್ಕಾನಿ ಉಗ್ರರು, ಹಫೀಜ್ ಸಯೀದ್ ಅಲ್ಲ.!

ಅಮೆರಿಕಾ ಟಾರ್ಗೆಟ್ ಮಾಡುತ್ತಿರುವುದು ಹಫೀಜ್ ಸಯೀದ್ ನ್ನು ಅಲ್ಲ, ಬದಲಾಗಿ ಹಕ್ಕಾನಿ ಉಗ್ರರನ್ನು ಎಂದು ಹೇಳಲಾಗುತ್ತಿದೆ.
ಹಫೀಜ್ ಸಯೀದ್
ಹಫೀಜ್ ಸಯೀದ್
ವಾಷಿಂಗ್ ಟನ್: 15 ವರ್ಷಗಳ ಕಾಲ ಪಾಕಿಸ್ತಾನಕ್ಕೆ ನೀಡುತ್ತಿದ್ದ ಆರ್ಥಿಕ ನೆರವಿಗೆ ಕಡಿವಾಣ ಹಾಕುವ ಮೂಲಕ ಪಾಕಿಸ್ತಾನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲವೇ ದಿನಗಳ ಹಿಂದೆ ಶಾಕ್ ನೀಡಿದ್ದರು. ಈ ಕುರಿತು ಅನೇಕ ರೀತಿಯ ವಿಶ್ಲೇಷಣೆಗಳು ನಡೆದಿದ್ದು, ಅಮೆರಿಕಾ ಟಾರ್ಗೆಟ್ ಮಾಡುತ್ತಿರುವುದು ಹಫೀಜ್ ಸಯೀದ್ ನ್ನು ಅಲ್ಲ, ಬದಲಾಗಿ ಹಕ್ಕಾನಿ ಉಗ್ರರನ್ನು ಎಂದು ಹೇಳಲಾಗುತ್ತಿದೆ. 
ಎಲ್ಇಟಿ ವಿಷಯದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ, ಬದಲಾಗಿ ಪಾಕಿಸ್ತಾನ ಹಕ್ಕಾನಿ ಉಗ್ರಜಾಲದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಪೇಕ್ಷಿಸುತ್ತೇವೆ ಎಂದು ಅಮೆರಿಕ ಹೇಳಿದೆ. ಹಫೀಜ್ ಸಯೀದ್ ಜೈಲಿನಿಂದ ಬಿಡುಗಡೆಯಾದ ನಂತರ ಅಮೆರಿಕ ಪಾಕ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತಾದರೂ ನಂತರದ ದಿನಗಳಲ್ಲಿ ತನ್ನ ಗಮನವನ್ನು ಅಫ್ಘಾನ್ ಕೇಂದ್ರಿತ ಉಗ್ರ ಸಂಘಟನೆಗಳತ್ತ ಹರಿಸಿತ್ತು., 
ಅಮೆರಿಕಾಗೆ ಹಫೀಜ್ ಸಯೀದ್ ಗಿಂತಲೂ ತಾಲೀಬಾನ್ ಹಾಗೂ ಹಕ್ಕಾನಿ ಉಗ್ರ ಜಾಲದ ವಿರುದ್ಧ ಪಾಕ್ ಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯವಿದೆ ಎಂಬುದಕ್ಕೆ ಜ.6 ರಂದು ನೀಡಿದ್ದ ಎಚ್ಚರಿಕೆಯೇ ಉದಾಹರಣೆಯಾಗಿದ್ದು, " ಒಂದು ವೇಳೆ ಪಾಕಿಸ್ತಾನ ತಾಲೀಬಾನ್ ಹಾಗೂ ಹಕ್ಕಾನಿ ಉಗ್ರಜಾಲದ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದಲ್ಲಿ ಪಾಕಿಸ್ತಾನದೊಂದಿಗೆ ವ್ಯವಹರಿಸಲು ಅಮೆರಿಕಾ ಎಲ್ಲಾ ಆಯ್ಕೆಗಳನ್ನೂ ಮುಕ್ತವಾಗಿರಿಸಿಕೊಂಡಿದೆ ಎಂದು ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ  ಅಮೆರಿಕಾಗೆ ಪಾಕಿಸ್ತಾನ ಹಫೀಜ್ ಸಯೀದ್ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಿಂತಲೂ ತಕ್ಷಣವೇ ಹಕ್ಕಾನಿ ಹಾಗೂ ತಾಲೀಬಾನ್ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯವಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com